ಫೋನ್ ಕದ್ದಾಲಿಕೆ ಮಾಡಿ ಸಿಕಿಬಿದ್ದ ಡಿಸಿಪಿ, ತನಿಖೆಗೆ ಆದೇಶ…!

ಈ ಸುದ್ದಿಯನ್ನು ಶೇರ್ ಮಾಡಿ

Phone-Taping

ಬೆಂಗಳೂರು, ಜೂ.6, ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಚರಣ ರೆಡ್ಡಿ ಅವರ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿದೆ.  ಡಿಸಿಪಿ ಅಜಯ್ ಹಿಲೋರಿ ಅವರು ಚರಣರೆಡ್ಡಿ ಅವರ ಫೋನ್ ಕದ್ದಾಲಿಕೆ ನಡೆಸಿದ್ದರೆಂಬ ಆರೋಪ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಅವರು ತನಿಖೆಗೆ ಆದೇಶ ನೀಡಿದ್ದಾರೆ.  ಕಳೆದ ಹಲವು ತಿಂಗಳಿನಿಂದ ಇಲಾಖೆಯಲ್ಲಿ ಕೆಲವರು ನನ್ನ ಫೋನ್ ಕದ್ದಾಲಿಕೆ ನಡೆಸುತ್ತಿದ್ದಾರೆಂದು ಚರಣ್ ರೆಡ್ಡಿ ದೂರು ನೀಡಿದ್ದರು.ಕಾವೇರಿ ನದಿ ನೀರು ಹಂಚಿಕೆ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಉಂಟಾಗಿದ್ದ ಗಲಭೆ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಹಾಗೂ ಮತ್ತಿತರರ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು.   ಚರಣ್ ರೆಡ್ಡಿ ಅವರ ಮೊಬೈಲ್ ಸಂಖ್ಯೆಯನ್ನು ತಿಳಿದಿದ್ದ ಡಿಸಿಪಿ ಅಜಯ್ ಹಿಲೋರಿ ಅವರು ಯಾರಯಾರ ಜೊತೆ ಮಾತುಕತೆ ನಡೆಸಿದ್ದಾರೆ, ಏನೇನು ಮಾತನಾಡಿದ್ದಾರೆ ಎಂಬುದೂ ಸೇರಿದಂತೆ ಇತ್ಯಾದಿ ಗೌಪ್ಯತೆ ಕಲೆಹಾಕಿದ್ದರು.  ಈ ವಿಷಯವನ್ನು ಹಿಲೋರಿ ಗೌಪ್ಯವಾಗಿಡದೆ, ತಮ್ಮ ಸಹಪಾಠಿಗಳ ಜೊತೆ ವಿಷಯವನ್ನು ವಿನಿಮಯ ಮಾಡಿಕೊಂಡಿದ್ದರಲ್ಲದೆ, ಚರಣ್‍ರೆಡ್ಡಿ ಗಲಭೆ ಹತ್ತಿಕ್ಕಲು ಯಾವಯಾವ ತಂತ್ರವನ್ನು ಅನುಸರಿಸಿದ್ದರೆಂಬುದ್ದನ್ನು ಬಹಿರಂಗ ಮಾಡಿದ್ದರು.ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ದೂರವಾಣಿಯನ್ನು ತಮ್ಮ ಇಲಾಖೆಯವರೆ ಕದ್ದಾಲಿಕೆ ನಡೆಸಿದ್ದರೆಂದು ಅಂದಿನ ಡಿಜಿಪಿ ಓಂಪ್ರಕಾಶ್‍ಗೆ ದೂರು ನೀಡಿದ್ದರು. ಆದರೆ ಈ ದೂರನ್ನು ಗಂಭೀರವಾಗಿ ಪರಿಗಣಿಸದೆ ತನಿಖೆಗೆ ಆದೇಶ ನೀಡಿರಲಿಲ್ಲ. ಪುನಃ ಚರಣ್ ರೆಡ್ಡಿ ತನಿಖೆಗೆ ಮನವಿ ಮಾಡಿರುವುದರಿಂದ ದತ್ತ ಅವರು ತನಿಖೆಗೆ ಆದೇಶ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin