ಬೆಂಗಳೂರಿನಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿದೆ 1800 ದಶಲಕ್ಷ ಲೀ. ತ್ಯಾಜ್ಯ ನೀರು

ಈ ಸುದ್ದಿಯನ್ನು ಶೇರ್ ಮಾಡಿ

Bengaluru-waste-water

ಬೆಂಗಳೂರು, ಜೂ.6- ನಗರದಲ್ಲಿ 1800 ದಶಲಕ್ಷ ಲೀಟರ್ ತ್ಯಾಜ್ಯ ನೀರು ಉತ್ಪಾದನೆಯಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದರು.  ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಬಿ.ಎನ್.ವಿಜಯಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೋರ್‍ವೆಲ್‍ಗಳಿಂದ 400 ದಶಲಕ್ಷ ಲೀಟರ್, ಕಾವೇರಿ ನದಿ ನೀರು ಪ್ರಕ್ರಿಯೆಯಿಂದ 1400 ದಶಲಕ್ಷ ಲೀಟರ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಬೆಂಗಳೂರು ಜಲಮಂಡಳಿ 780 ದಶಲಕ್ಷ ಲೀಟರ್ ಸಾಮಥ್ರ್ಯದ 15 ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಹೆಚ್ಚುವರಿಯಾದ ತ್ಯಾಜ್ಯ ನೀರು ಶುದ್ಧೀಕರಿಸಲು ಇನ್ನೂ 12 ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು.ಈ ಶುದ್ಧೀಕರಣ ಘಟಕಗಳು 2017ರ ಅಂತ್ಯದೊಳಗೆ ಕಾರ್ಯಾರಂಭಗೊಳ್ಳಲಿವೆ. ಉಳಿದ 60 ದಶಲಕ್ಷ ಲೀಟರ್ ಸಾಮಥ್ರ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು 2018ರೊಳಗೆ ಕಾರ್ಯಾರಂಭ ಮಾಡಲಿವೆ. ಶುದ್ಧೀಕರಿಸಿದ ನೀರನ್ನು ಕೋಲಾರ, ಹೊಸಕೋಟೆ, ಆನೇಕಲ್ ಕೆರೆಗಳಿಗೆ ತುಂಬಿಸುವ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.  ಕೈಗಾರಿಕೆಗಳಿಗೆ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಗಳನ್ನು ಅಳವಡಿಸುವುದು ಕಡ್ಡಾಯ ವಾಗಿದೆ. ಶುದ್ಧೀಕರಿಸದ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸಿ ದರೆ ಅಂತಹ ಕೈಗಾರಿಕೆಗಳ ಲೈಸೆನ್ಸ್ ರದ್ದುಪಡಿಸಲಾಗುವುದು, ಹಲಸೂರು ಕೆರೆ ಬಳಿ ನಿತ್ಯ 2 ದಶಲಕ್ಷ ಲೀಟರ್ ಸಾಮಥ್ರ್ಯದ ತ್ಯಾಜ್ಯ ನೀರು ಶುದ್ಧೀಕರಿಸುವ ಘಟಕ ಸ್ಥಾಪಿಸಲಾಗುವುದು. ಕಬ್ಬನ್‍ಪಾರ್ಕ್‍ನಲ್ಲಿ ತೃತೀಯ ಹಂತದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಪ್ರಗತಿಯಲ್ಲಿದೆ ಎಂದು ಹೇಳಿದರು.

ತ್ಯಾಜ್ಯ ನೀರಿನ ಶುದ್ಧೀಕರಿಸಿದ ಘಟಕಗಳ ಕೊರತೆ ನೀಗಿಸಲು ನಿತ್ಯ 515 ದಶಲಕ್ಷ ಲೀಟರ್ ಸಾಮಥ್ರ್ಯದ 9 ಹೊಸ ಘಟಕಗಳನ್ನು ಚಿಂತನೆ ನಡೆಸಲಾಗಿದೆ ಎಂದರು.  ವೃಷಭಾವತಿ ಕಣಿವೆಯ 150 ದಶಲಕ್ಷ ಲೀಟರ್, ಕೋರಮಂಗಲ ಮತ್ತು ಬೆಳ್ಳಘಟ್ಟ ಕಣಿವೆಯ 150 ದಶಲಕ್ಷ ಲೀಟರ್, ಹೆಬ್ಬಾಳ 100 ದಶಲಕ್ಷ ಸಾಮಥ್ರ್ಯದ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಲು ಟೆಂಡರ್ ಕರೆಯಲಾಗಿದ್ದು, ಜೂನ್ ಅಂತ್ಯದೊಳಗೆ ಟೆಂಡರ್ ಮುಗಿಯಲಿದ್ದು, 2020ರೊಳಗೆ ಕಾರ್ಯಾರಂಭ ಮಾಡಲಿವೆ ಎಂದರು.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ 129 ದಶಲಕ್ಷ ಲೀಟರ್ ಸಾಮಥ್ರ್ಯದ 16 ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದ ಅವರು, 1766.50 ದಶಲಕ್ಷ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸಬಹುದಾಗಿದೆ ಎಂದು ಹೇಳಿದರು.  ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆ, ಅಪಾರ್ಟ್‍ಮೆಂಟ್‍ಗಳ ಗಾರ್ಡನ್, ಕಾರು ತೊಳೆಯಲು ಉಪಯೋಗಿಸಬಹುದಾಗಿದೆ. ತ್ಯಾಜ್ಯ ನೀರನ್ನು ಶುದ್ಧೀಕರಿಸಲು ಪ್ರತಿ ಲೀಟರ್‍ಗೆ 5 ರಿಂದ 6 ರೂ. ವೆಚ್ಚ ತಗುಲಲಿದೆ. ಈ ವೆಚ್ಚವು ಮೂರನೆ ಹಂತದಲ್ಲೇ ದ್ವಿಗುಣವಾಗಲಿದೆ. ದ್ವಿತೀಯ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಕಬ್ಬನ್‍ಪಾರ್ಕ್, ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಫ್ಯಾಕ್ಟರಿಗಳಿಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin