4ನೇ ಬಾರಿ ನೇಪಾಳ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇಬಾ

ಈ ಸುದ್ದಿಯನ್ನು ಶೇರ್ ಮಾಡಿ

Share---01

ಕಠ್ಮಂಡು, ಜೂ.6-ಹಿರಿಯ ರಾಜಕೀಯ ನೇತಾರ ಶೇರ್ ಬಹದ್ದೂರ್ ದೇಬಾ ನಾಲ್ಕನೇ ಬಾರಿ ನೇಪಾಳದ ಪ್ರಧಾನಮಂತ್ರಿಯಾಗಲಿದ್ದಾರೆ. ಸಂಸತ್ತಿನಲ್ಲಿ ತಲೆದೋರಿದ್ದ ಬಿಕ್ಕಟ್ಟು ಶಮನಗೊಳಿಸಲು ವಿರೋಧಪಕ್ಷಗಳು ನಿರ್ಧರಿಸಿದ ನಂತರ ಕಂಡುಬಂದ ಬೆಳವಣಿಗೆಯಲ್ಲಿ ದೇಬಾ ಹಿಮಾಲಯ ರಾಷ್ಟ್ರದ ಅತ್ಯುನ್ನತ ಪದವಿಗೇರಲು ಸಜಾಗಿದ್ದಾರೆ.   ನೇಪಾಳ ಪ್ರಧಾನಿ ಹುದ್ದೆಗೆ ಅಪರಾಹ್ನ ಚುನಾವಣೆ ನಡೆಯಲಿದೆ.



70 ವರ್ಷದ ದೇಬಾ ಏಕೈಕ ಅಭ್ಯರ್ಥಿಯಾಗಿದ್ದು, ಅವರ ವಿರುದ್ಧ ಪ್ರಮುಖ ರಾಜಕೀಯ ಪಕ್ಷ ಯುಎಂಎಲ್ ಮತ್ತು ಇತರ ಯಾವುದೇ ರಾಜಕೀಯ ಪಕ್ಷಗಳು ಉಮೇದುವಾರರನ್ನು ಕಣಕ್ಕಿಳಿಸಿಲ್ಲ. ಹೀಗಾಗಿ ಅವರ ಆಯ್ಕೆ ಸುಗಮವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin