ತಮಿಳುನಾಡಿನ ಸೇಲಂನಲ್ಲಿ ಬಸ್‍ನಲ್ಲೇ ಬಾಲಕಿ ಮೇಲೆ ಗ್ಯಾಂಗ್ ರೇಪ್, ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Gang-Rape--01

ಚೆನ್ನೈ, ಜೂ. 7- ದೆಹಲಿಯ ನಿರ್ಭಯಾ ಪ್ರಕರಣವನ್ನು ನೆನಪಿಸುವ ಘಟನೆಯೊಂದು ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. 14 ವರ್ಷದ ಬಾಲಕಿಯೊಬ್ಬಳ ಮೇಲೆ ದುಷ್ಕರ್ಮಿಗಳು ಬಸ್‍ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.  14 ವರ್ಷದ ಬಾಲಕಿ ಖಾಸಗಿ ಬಸ್ ಒಂದರಲ್ಲಿ ತೆರಳುತ್ತಿದ್ದಾಗ, ಆ ಬಸ್‍ನ ಇಬ್ಬರು ಚಾಲಕರು ಮತ್ತು ಒಬ್ಬ ಕಂಡಕ್ಟರ್ ಒಂಟಿ ಬಾಲಕಿಯ ಮೇಲೆ ಈ ಪೈಶಾಚಿಕ ಕೃತ್ಯ ನಡೆಸಿದ್ದಾರೆ.



ಕಾರಣಾಂತರದಿಂದ ಮನೆ ಬಿಟ್ಟು ಬಂದಿದ್ದ ಈ ಬಾಲಕಿ ಈ ವರ್ಷ 9ನೆ ತರಗತಿ ಪೂರೈಸಿದ್ದಾಳೆ. ಸೇಲಂನ ಬಸ್ ನಿಲ್ಧಾಣಕ್ಕೆ ಬಂದು ಒಮಲೂರ್ ಮತ್ತು ಸೇಲಂ ನಡುವೆ ಟ್ರಿಪ್ ಹೊಡೆಯುವ ಬಸ್ ಹತ್ತಿದ್ದಾಳೆ. ಒಮಲೂರ್‍ಗೆ ಇಳಿಯಬೇಕಾಗಿದ್ದ ಬಾಲಕಿಯನ್ನು ಅಲ್ಲಿ ಇಳಿಸದೆ ರಾತ್ರಿ ವರೆಗೂ ಟ್ರಿಪ್ ಮುಗಿಸಿದ್ದಾರೆ. ನಂತರ ರಾತ್ರಿ ಇಬ್ಬರು ಚಾಲಕರು ಮತ್ತು ಕಂಡಕ್ಟರ್ ಆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಬಸ್‍ನಲ್ಲಿ ಬಾಲಕಿಯ ಕಿರುಚಾಟ ಕೇಳಿ ಸಮೀಪದ ಹಳ್ಳಿಯ ಜನ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಮೂವರೂ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯನ್ನು ಆಪತ್ರೆಗೆ ದಾಖಲಿಸಿದ ಪೊಲೀಸರು ಮೂವರು ದುಷ್ಕರ್ಮಿಗಳನ್ನೂ ಬಂಧಿಸಿದ್ದಾರೆ. ಬಾಲಕಿಯ ಪೋಷಕರು ದಲಿತ ಕಾರ್ಮಿಕರಾಗಿದ್ದು ತಮ್ಮ ಮಗಳು ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಿದ್ದಾರೆ.  ಗಿದ್ದು ತಮ್ಮ ಮಗಳು ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin