‘ದೇಶ ದೇಶಗಳ ನಡುವೆ ನೀರು ಹಂಚಿಕೆ ವಿಚಾರದಲ್ಲಿ ಯುದ್ಧವಾಗಬಾರದು’

ಈ ಸುದ್ದಿಯನ್ನು ಶೇರ್ ಮಾಡಿ

UN-India

ವಿಶ್ವಸಂಸ್ಥೆ,ಜೂ.7– ದೇಶ ದೇಶಗಳ ನಡುವೆ ನೀರು ಹಂಚಿಕೆ ವಿಷಯ ಸ್ನೇಹ-ಸೌಹಾರ್ದತೆಗಳ ಪ್ರವರ್ಧನ ಮಾನಕ್ಕೆ ಬುನಾದಿಯಾಗಬೇಕೆ ಹೊರತು ವಿವಾದ ಸೃಷ್ಟಿಸಬಾರದು ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗಟರೆಸ್ ಅಭಿಪ್ರಾಯಪಟ್ಟಿದ್ದಾರೆ.   ಭಾರತ ಪಾಕಿಸ್ತಾನದ ನಡುವೆ ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ ಎರಡು ದೇಶಗಳ ನಡುವೆ ಈಗಾಗಲೇ ಮೂರು ಯುದ್ಧಗಳನ್ನು ಕಂಡಿದೆ. ನೀರು ಹಂಚಿಕೆ ವಿವಾದ ಯಾವುದೇ ದೇಶಗಳ ಮಧ್ಯೆ ಸೌಹಾರ್ದಯುತವಾಗಿರಬೇಕು, ವೈಮನಸ್ಸು ಮತ್ತು ಯುದ್ಧಕ್ಕೆ ಎಡೆ ಮಾಡಿಕೊಡಬಾರದು ಎಂದು ಭಾರತ, ಪಾಕಿಸ್ತಾನಗಳ ನಡುವಿನ ನದಿ ನೀರಿನ ವಿವಾದದ ಬಗ್ಗೆ ಗಟರೆಸ್ ವಿಶ್ಲೇಷಿಸಿದ್ದಾರೆ.



ನೀರು, ಶಾಂತಿ ಮತ್ತು ಭದ್ರತೆ ಇವು ಮೂರು ಯಾವುದೇ ದೇಶದ ರಾಜತಾಂತ್ರಿಕತೆಯ ಪ್ರಮುಖ ಅಂಶಗಳು. ಇವು ಆಯಾ ದೇಶಗಳ ನಡುವಿನ ಗಡಿ ವಿವಾದ ಅಥವಾ ಯಾವುದೇ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಏಕೆಂದರೆ ದೇಶಗಳ ಮಧ್ಯೆ ಈ ಮೂರು ಅಂಶಗಳು ಪ್ರಮುಖವಾಗಿರುತ್ತವೆ.
ಇತ್ತೀಚೆಗೆ ಬೊಲಿವಿಯ ಅಧ್ಯಕ್ಷ ಇವೊ ಮೊರೆಲ್ಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಟರೆಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ, ಪಾಕಿಸ್ತಾನದ ನಡುವೆ 1960ರಲ್ಲಿ ಅಸ್ತಿತ್ವಕ್ಕೆ ಬಂದ ಜಲ ಒಪ್ಪಂದ ಈಗಾಗಲೇ ಆ ದೇಶಗಳ ನಡುವೆ ಮೂರು ಯುದ್ದಗಳನ್ನು ನೋಡಿದೆ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin