ಪ್ರಸಕ್ತ ಸಾಲಿನಲ್ಲಿ 7 ಲಕ್ಷ ಜನರಿಗೆ ವಸತಿ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Krishnappa

ಬೆಂಗಳೂರು,ಜೂ. 7- ಪ್ರಸಕ್ತ ವರ್ಷ ರಾಜ್ಯದಾದ್ಯಂತ ಏಳು ಲಕ್ಷ ಮಂದಿಗೆ 4500 ಕೋಟಿ ರೂ ವೆಚ್ಚದಲ್ಲಿ ಮನೆಗಳನ್ನು ಒದಗಿಸುವುದಾಗಿ ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.  ವಿಧಾನಸಭೆಯ ಮೊಗಸಾಲೆಯಲ್ಲಿಂದು ಈ ಸಂಜೆಯೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ, ವಿವಿಧ ಯೋಜನೆಗಳ ಅಡಿ ರಾಜ್ಯದ ಎಲ್ಲೆಡೆ ಏಳು ಲಕ್ಷ ಮಂದಿಗೆ ಮನೆಗಳನ್ನು ಒದಗಿಸುವುದಾಗಿ ತಿಳಿಸಿದರು.  ವಸತಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶತಾಯ ಗತಾಯ ಫಲಾನುಭವಿಗಳಿಗೆ ಮನೆ ಒದಗಿಸುತ್ತೇವೆ. ಈ ವಿಷಯದಲ್ಲಿ ಯಾವ ಅನುಮಾನವೂ ಬೇಕಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.ಪರಿಶಿಷ್ಟರಿಗೆ ಆನ್ ಡಿಮಾಂಡ್ ಆಧಾರದ ಮೇಲೆ ಮನೆಗಳನ್ನು ನೀಡುವುದಾಗಿ ತಿಳಿಸಿದ ಅವರು, ನಮಗೆ ಮನೆಯಿಲ್ಲ ಎಂದು ಅವರು ಅರ್ಜಿ ನೀಡಿದರೆ ಸಾಕು. ತಕ್ಷಣವೇ ಅವರಿಗೆ ಮನೆಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಆ ಮೂಲಕ ಪರಿಶಿಷ್ಟರಿಗೆ ಗಣನೀಯ ಸಂಖ್ಯೆಯ ಮನೆಗಳು ಲಭ್ಯವಾಗುತ್ತಿವೆ ಎಂದು ನುಡಿದ ಅವರು, ಕೆಲ ಕಾರಣಗಳಿಗಾಗಿ ಮನೆ ನಿರ್ಮಾಣ ಕಾರ್ಯದಲ್ಲಿ ಒಂದಷ್ಟು ವಿಳಂಬವಾಗಿದ್ದರೂ ಈ ವರ್ಷ ಅದನ್ನು ಸರಿಪಡಿಸಿಕೊಳ್ಳುವುದಾಗಿ ವಿವರಿಸಿದರು. ಸಾಮಾನ್ಯ ವರ್ಗದವರಿಗೆ ಐದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಒದಗಿಸುತ್ತೇವೆ. ಅದೇ ರೀತಿ ಪರಿಶಿಷ್ಟರಿಗೆ ಒಂದೂವರೆ ಲಕ್ಷದಷ್ಟು ಮನೆಗಳನ್ನು ಒದಗಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin