ಡ್ರಗ್ಸ್ ದಂಧೆ : ಬಾಲಿವುಡ್‍ನ ನಟಿ ಮಮತಾ, ಪತಿ ವಿಕ್ಕಿ ಘೋಷಿತ ಅಪರಾಧಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Actress-01

ಥಾಣೆ, ಜೂ.8- ಬಹುಕೋಟಿ ರೂ.ಗಳ ಮಾದಕ ವಸ್ತು ದಂಧೆ ಪ್ರಕರಣಗಳಲ್ಲಿ ನಾಪತ್ತೆಯಾಗಿರುವ ಬಾಲಿವುಡ್‍ನ ಖ್ಯಾತ ನಟಿಯಾಗಿದ್ದ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ವಿಕ್ಕಿ ಗೋಸ್ವಾಮಿ ಅವರನ್ನು ವಿಶೇಷ ನ್ಯಾಯಾಲಯವೊಂದು ಘೋಷಿತ ಅಪರಾಧಿಗಳು ಮತ್ತು ನಾಪತ್ತೆಯಾದವರು ಎಂದು ಘೋಷಿಸಿದೆ. ಅಲ್ಲದೇ ಆರೋಪಿಗಳ ವಿರುದ್ಧ ವಾರೆಂಟ್‍ಗಳನ್ನು ಜಾರಿಗೊಳಿಸಿದೆ.   ಸುಮಾರು 2,000 ಕೋಟಿ ರೂ. ಮೌಲ್ಯದ ಎಫೆಡ್ರೈನ್ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಮಮತಾ ಮತ್ತು ವಿಕ್ಕಿ ಗೋಸ್ವಾಮಿ ಸೇರಿದಂತೆ 14 ಆರೋಪಿಗಳು ಶಾಮೀಲಾಗಿದ್ದಾರೆ. ಮಮತಾ ದಂಪತಿ ಕೀನ್ಯಾ ಮೊಮ್‍ಬಾಸಾ ನಗರದಲ್ಲಿದ್ದಾರೆಂದು ಹೇಳಲಾಗಿದೆ.



ಈ ಪ್ರಕರಣ ಬೆಳಕಿಗೆ ಬಂದು ಒಂದು ವರ್ಷವಾಗಿದ್ದು, ಆಗಿನಿಂದ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ವಿಶೇಷ ಎನ್‍ಡಿಪಿಎಸ್(ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸಸ್) ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಎಂ.ಪಟವರ್ಧನ್ ಅವರು ಘೋಷಿತ ಅಪರಾಧಿಗಳು ಮತ್ತು ನಾಪತ್ತೆಯಾದವರೆಂದು ಘೋಷಿಸಿದ್ದಾರೆ. ಅಲ್ಲದೇ ಆರೋಪಿಗಳಿಗೆ ಸೇರಿದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin