‘ನ್ಯಾಯ ಕೊಡಿ, ಇಲ್ಲವೇ ದಯಾಮರಣ ನೀಡಿ’ : ಕುಟುಂಬದೊಂದಿಗೆ ಉಪನ್ಯಾಸಕ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Familya-----c--0054

ಬೆಂಗಳೂರು, ಜೂ.8- ಕಾರ್ಯಾಬಾರದ ಕೊರತೆ ಉಂಟಾಗಿ ವೇತನ ತಡೆ ಹಿಡಿದಿರುವುದನ್ನು ಖಂಡಿಸಿ ಬೀದರ್‍ನ ಜನತಾ ಪಿಯು ಕಾಲೇಜಿನ ಉಪನ್ಯಾಸಕ ರಮೇಶ್‍ಮರಾಠಿ ತನ್ನ ಕುಟುಂಬದವರೊಂದಿಗೆ ಇಂದು ನಗರದ ಪದವಿಪೂರ್ವ ಶಿಕ್ಷಣ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಮಗೆ ಉದ್ದೇಶಪೂರ್ವಕವಾಗಿ ಆಡಳಿತ ಮಂಡಳಿ ಕಾರ್ಯಾಬಾರದ ಕೊರತೆ ಉಂಟು ಮಾಡಿ ಕಳೆದ 11 ವರ್ಷಗಳಿಂದ ವೇತನ ನೀಡಿಲ್ಲ. ಇದರಿಂದ ಜೀವನ ಸಾಗಿಸುವುದೇ ದುಸ್ತರವಾಗಿದೆ.1991ರಿಂದ ಬೀದರ್‍ನ ಜನತಾ ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2006ರಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲವಿದ್ದರೂ ಆಡಳಿತ ಮಂಡಳಿ ಮರಾಠಿ ವಿಷಯದ ವಿಭಾಗವನ್ನು ಮುಚ್ಚಿದ್ದರಿಂದ ಕಾರ್ಯಾಬಾರದ ಕೊರತೆ ಉಂಟಾಗಿ ವೇತನ ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದರು. ಸರ್ಕಾರ ತುರ್ತಾಗಿ ವೇತನ ಬಿಡುಗಡೆಗೆ ಕ್ರಮ ವಹಿಸದಿದ್ದರೆ ನಮಗೆ ಸಾವೇ ಗತಿ. ಈ ನಿಟ್ಟಿನಲ್ಲಿ ನಮ್ಮ ಕುಟುಂಬಕ್ಕೆ ನ್ಯಾಯಾ ಒದಗಿಸಿಕೊಡಬೇಕು. ಇಲ್ಲದಿದ್ದರೆ ರಾಷ್ಟ್ರಪತಿಗಳು ತಮಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.


ಸ್ಥಳದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯಪುರ್ಲೆ ಮತ್ತಿತರರು ಉಪಸ್ಥಿತರ್ದಿರು. ಈ ಸಂಬಂಧ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಮೇಶ್ ಮರಾಠಿ ಅವರ ಪತ್ನಿ ಮತ್ತು ಮಕ್ಕಳು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin