ಪತ್ನಿ ಮೇಲೆ ಅತ್ಯಾಚಾರ ಯತ್ನ ನಡೆದಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Man-Suicide-Hang

ಚನ್ನಪಟ್ಟಣ, ಜೂನ್.8- ಕೆಲ ದಿನಗಳ ಹಿಂದೆ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ ಗೃಹಿಣಿಯೋರ್ವಳ ಪತಿ ಮಾನಸಿಕವಾಗಿ ನೊಂದು ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ. ಸಿದ್ದೇಶ್ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೆಲ ದಿನಗಳ ಹಿಂದೆ ಮನೆಯಲ್ಲಿ ಒಬ್ಬೊಂಟಿಯಾಗಿದ್ದ ಸಿದ್ದೇಶನ ಪತ್ನಿಯ ಮೇಲೆ ಅದೇ ಗ್ರಾಮದ ಗಿರೀಶ್ ಎಂಬಾತ ಅತ್ಯಾಚಾರಕ್ಕೆ ಯತ್ನ ನಡೆಸಿದ ಸಂದರ್ಭದಲ್ಲಿ ತಾನೆ ತನ್ನ ಪತ್ನಿಯನ್ನು ಕಾಮಪಿಶಾಚಿಯಿಂದ ರಕ್ಷಿಸಿದ್ದ.ಘಟನೆ ನಡೆದಾಗಿನಿಂದ ಮಾನಸಿಕವಾಗಿ ಜರ್ಝರಿತನಾಗಿದ್ದ ಸಿದ್ದೇಶ್, ಜೀವನದಲ್ಲಿ ಜಿಗುಪ್ಸೆಗೊಂಡು ಗದ್ದೆ ಕಡೆ ಹೋಗಿ ಬರುವುದಾಗಿ ಪತ್ನಿಗೆ ಹೇಳಿ ಹೋದವ ತನ್ನ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೂರು ವರ್ಷದ ಹಿಂದೆ ತನ್ನ ಅಕ್ಕನ ಮಗಳನ್ನೇ ವಿವಾಹವಾಗಿದ್ದ ಸಿದ್ದೇಶ್ ರೈತನಾಗಿದ್ದು, ತನ್ನ ಕುಟುಂಬದೊಂದಿಗೆ ಅನ್ಯೋನ್ಯವಾಗಿದ್ದರು ಎಂದು ಹೇಳಲಾಗಿದೆ. ಗರ್ಭಿಣಿಯಾದ ಪತ್ನಿಯ ಮೇಲೆ ಅತ್ಯಾಚಾರಯತ್ನ ಘಟನೆ ನಡೆದಾಗಿನಿಂದ ಮಾನಸಿಕ ತೊಳಲಾಟದಿಂದ ಬಳಲುತ್ತಿದ್ದನೆಂದು ಹೇಳಲಾಗಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin