ಮಾಲೀಕನ 62,000 ರೂ.ಗರಿಗರಿ ನೋಟು ತಿಂದು ತೇಗಿದ ಮೇಕೆ..!

ಈ ಸುದ್ದಿಯನ್ನು ಶೇರ್ ಮಾಡಿ

60,00-notes

ಕನ್ನೌಜ್ (ಉ.ಪ್ರ.), ಜೂ.8-ಆಡು ಮುಟ್ಟದ ಸೊಪ್ಪಿಲ್ಲ ಎಂಬುದು ಜನಪ್ರಿಯ ಗಾದೆ. ಈಗ ಆ ಮಾತನ್ನು ಆಡು ತಿನ್ನದೇ ಬಿಡದ ವಸ್ತುವಿಲ್ಲ ಎಂದು ಬದಲಾವಣೆ ಮಾಡಬಹುದು. ಏಕೆಂದರೆ ಅಂಥ ವಿಚಿತ್ರ ಪ್ರಸಂಗ ಉತ್ತರಪ್ರದೇಶದ ತಾಲ್‍ಗಾಮ್‍ನ ಸಿಲೌಪುರ ಹಳ್ಳಿಯಲ್ಲಿ ನಡೆದಿದೆ.  ಹಸಿದಿದ್ದ ಮೇಕೆಯೊಂದು ತನಗೆ ದುಬಾರಿ ವ್ಯಯಕ್ಕೆ ಕಾರಣವಾಗುತ್ತದೆ ಎಂಬ ಸಂಗತಿ ರೈತ ಸರ್ವೇಶ್ ಕುಮಾರ್ ಪಾಲ್ ಎಂಬಾತನಿಗೆ ಮನವರಿಕೆಯಾದ ಪ್ರಸಂಗವಿದು. ಸ್ನಾನಕ್ಕೆ ತೆರಳಿದಾಗ ಸರ್ವೇಶ್ ಕುಮಾರ್ ಪ್ಯಾಂಟಿನಲ್ಲಿದ್ದ 2,000 ರೂ.ಗಳ 31 ಗರಿಗರಿ ಕೆಂಪು ನೋಟುಗಳನ್ನು(62,000 ರೂ.ಗಳು) ಮೇಕೆ ತಿಂದು ಹಾಕಿತು.ಇಟ್ಟಿಗೆಗಳನ್ನು ಖರೀದಿಸಲು ಅವರು ತಮ್ಮ ಪ್ಯಾಂಟಿನಲ್ಲಿ 66,000 ರೂ.ಗಳ ಹೊಸ ನೋಟುಗಳನ್ನು ಇಟ್ಟು, ಸ್ನಾನಕ್ಕೆ ತೆರಳಿದ್ದರು. ತುಂಬಾ ಹಸಿದಿದ್ದ ಅವರ ಮೇಕೆ ಆಹಾರಕ್ಕಾಗಿ ಹುಡುಕುತ್ತಾ ಬಂದಾಗ ಕೆಂಪು ಕರೆನ್ಸಿಗಳು ಪ್ಯಾಂಟ್ ಜೇಬಿನಿಂದ ಇಣುಕುತ್ತಿತ್ತು. ಅದು ಆರಾಮವಾಗಿ ನೋಟುಗಳನ್ನು ಸಂತೋಷದಿಂದ ಅಗೆದು ತಿಂದು ಹಾಕಿತು. ಸ್ನಾನ ಮುಗಿಸಿ ಬಂದ ಕೃಷಿಕನಿಗೆ ತನ್ನ ಮೇಕೆ ಏನೋ ತಿನ್ನುತ್ತಿದೆ ಎಂದು ನೋಡಿದಾಗ ಹೌಹಾರಿದು. ಅದರ ಬಾಯಿಯಲ್ಲಿ ನೋಟಿ ತುದಿ ಕಾಣಿಸಿತು. ತಕ್ಷಣ ಪ್ಯಾಂಟ್ ಜೇಬನ್ನು ಪರಿಶೀಲಿಸಿದಾಗ 62,000 ರೂ.ಗಳನ್ನು ಮೇಕೆ ಗುಳುಂ ಮಾಡಿದ್ದು ಕಂಡುಬಂದಿತು. ಪಾಂಟಿನಲ್ಲಿ ಉಳಿದಿದ್ದ ಕೇವಲ ಎರಡು ನೋಟುಗಳು ಸರ್ವೇಶ್‍ನನ್ನು ಅಣಕಿಸುತ್ತಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin