ಮ್ಯಾನ್ಮಾರ್ ಮಿಲಿಟರಿ ವಿಮಾನ ಪತನ, 112 ಮಂದಿ ಸೇನಾ ಸಿಬ್ಬಂದಿ ಸಾವು, ಮೋದಿ ದಿಗ್ಭ್ರಮೆ
ನವದೆಹಲಿ, ಜೂ.8- ಮ್ಯಾನ್ಮಾರ್ ಮಿಲಿಟರಿ ವಿಮಾನ ನಿನ್ನೆ ಆಕಸ್ಮಿಕವಾಗಿ ಪತನಗೊಂಡು 112 ಮಂದಿ ಸೇನಾ ಸಿಬ್ಬಂದಿ ಅಸುನೀಗಿರುವ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಂಡಮಾನ್ ಸಮುದ್ರದಲ್ಲಿ ಮಾಯನ್ಮಾರ್ ಮಿಲಿಟರಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಹಲವು ಮೃತ ದೇಹಗಳ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರೆಯುತ್ತಿದೆ.
ಆಕಸ್ಮಿಕ ವಿಮಾನ ಪತನದಿಂದ 112 ಮಂದಿ ಸೇನಾ ಸಿಬ್ಬಂದಿ ಹತರಾಗಿರುವುದಕ್ಕೆ ತೀವ್ರ ಸಂತಾಪ ಸೂಚಿಸಿದ ಮೋದಿ, ಮ್ಯಾನ್ಮಾರ್ ವಿಮಾನ ಪತನ ಕಾರ್ಯಾಚರಣೆಗೆ ಭಾರತ ಸಹಾಯ ಹಸ್ತ ನೀಡಲು ಸದಾ ಸಿದ್ದವಿದೆ ಎಂದು ಟ್ವೀಟ್ ಮಾಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments