ಮ್ಯಾನ್‍ಹೋಲ್ ಇಳಿಯದಂತೆ ಪೌರಕಾರ್ಮಿಕರಿಗೆ ಸಾಕ್ಷ್ಯಚಿತ್ರದ ಮೂಲಕ ಅರಿವು ಮೂಡಿಸಲಾಗುವುದು

ಈ ಸುದ್ದಿಯನ್ನು ಶೇರ್ ಮಾಡಿ

H-Anjaneya

ಬೆಂಗಳೂರು, ಜೂ.8- ಮ್ಯಾನ್‍ಹೋಲ್ ಒಳಗೆ ಇಳಿದರೆ ಉಂಟಾಗುವ ಅಪಾಯ ಕುರಿತಂತೆ ಪೌರಕಾರ್ಮಿಕರಿಗೆ ಸಾಕ್ಷ್ಯ ಚಿತ್ರದ ಮೂಲಕ ಅರಿವು ಮೂಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮ್ಯಾನ್‍ಹೋಲ್ ಒಳಗೆ ಪೌರಕಾರ್ಮಿಕರನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜ ಕಲ್ಯಾಣ ಇಲಾಖೆವತಿಯಿಂದ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿ ಮ್ಯಾನ್‍ಹೋಲ್ ಒಳಗೆ ಇಳಿಯುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿಸ್ತೃತವಾಗಿ ಚಿತ್ರಿಸಿ ಪೌರಕಾರ್ಮಿಕರಿಗೆ ಚಿತ್ರವನ್ನು ಪ್ರದರ್ಶಿಸಿ ಅರಿವು ಮೂಡಿಸಲಾಗುವುದು ಎಂದರು.



ಮ್ಯಾನ್‍ಹೋಲ್ ಒಳಗೆ ವಿಷ ಅನಿಲ, ಇದರಿಂದ ಉಂಟಾಗಬಹುದಾದ ಪ್ರಾಣಾಪಾಯದ ಬಗ್ಗೆ ಸಾಕ್ಷ್ಯ ಚಿತ್ರದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಪೌರಕಾರ್ಮಿಕರನ್ನು ಮ್ಯಾನ್‍ಹೋಲ್ ಒಳಗೆ ಇಳಿಯುವವರು ಮತ್ತು ಇಳಿಸುವವರಿಗೂ ಅರಿವಿರಬೇಕು. ಮ್ಯಾನ್‍ಹೋಲ್ ಒಳಗೆ ಇಳಿಸಬಾರದೆಂಬ ಕಟ್ಟುನಿಟ್ಟಿನ ಕಾನೂನಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೈಸೂರು ಪ್ರಕರಣದ ಬಗ್ಗೆ ವರದಿ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin