ರಿಯಲ್‍ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿದ್ದ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

4-Arrested--01

ಬೆಂಗಳೂರು, ಜೂ.8- ಆಸ್ತಿ ವಿಚಾರವಾಗಿ ಅಕ್ಕನನ್ನೇ ಕೊಲೆ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಸಹಚರರೊಂದಿಗೆ ಸೇರಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ನಾಲ್ವರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.  ರಾಜೇಶ್‍ಗೌಡ, ನವೀನ್‍ಕುಮಾರ್, ಮೋಹನ್ ಮತ್ತು ರಾಜು ಬಂಧಿತ ಆರೋಪಿಗಳು.  ರಿಯಲ್‍ಎಸ್ಟೇಟ್ ವ್ಯವಹಾರ ಮತ್ತು ನೀರು ಶುದ್ಧೀಕರಿಸುವ ವೃತ್ತಿ ಮಾಡುತ್ತಿದ್ದ ಜಯರಾಂ(48) ಎಂಬಾತ 10 ವರ್ಷದ ಹಿಂದೆ ಆಸ್ತಿಗಾಗಿ ತನ್ನ ಅಕ್ಕನನ್ನೇ ಕೊಲೆ ಮಾಡಿದ್ದನು.


ಜಯರಾಂ ಅಕ್ಕನ ಮಗನಾದ ರಾಜೇಶ್‍ಗೌಡ ಅಂದಿನಿಂದ ಜಯರಾಂ ಮೇಲೆ ದ್ವೇಷ ಸಾಧಿಸುತ್ತಿದ್ದನು.   ರಾತ್ರಿ 7.30ರಲ್ಲಿ ಸಹಚರರೊಂದಿಗೆ ಸೇರಿ ರಾಜೇಶ್‍ಗೌಡ ಹೆಣ್ಣೂರು ಬಳಿ ಜಯರಾಂನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಆರೋಪಿಗಳ ವಿಚಾರಣೆ ಮುಂದುವರೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin