ಹುಲಿಗಳಿರುವ ಹೊಂಡಕ್ಕೆ ಜೀವಂತ ಕತ್ತೆಯನ್ನು ಎಸೆದ ಕ್ರೂರಿಗಳು..! (Video)

ಈ ಸುದ್ದಿಯನ್ನು ಶೇರ್ ಮಾಡಿ

Tiger--01

ಬೀಜಿಂಗ್, ಜೂ.8-ಚೀನಾದ ಮೃಗಾಲಯವೊಂದರ ಹುಲಿಗಳ ತಾಣವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರು ಆಘಾತಕ್ಕೆ ಒಳಗಾಗುವ ಘಟನೆಯೊಂದು ನಡೆಯಿತು. ವ್ಯಾಘ್ರಗಳಿದ್ದ ಹೊಂಡಕ್ಕೆ ಕ್ರೂರಿಗಳು ಜೀವಂತ ಕತೆಯೊಂದನ್ನು ಆಹಾರವಾಗಿ ಎಸೆದ ಕೃತ್ಯದಿಂದ ಅವರು ಆಘಾತಕ್ಕೆ ಒಳಗಾದರು. ವ್ಯಾಪಾರದಲ್ಲಿ ನಷ್ಟ ಹೊಂದಿದ ಹೂಡಿಕೆದಾರರ ಆಕ್ರೋಶಕ್ಕೆ ಪಾಪ ಶ್ರಮಜೀವಿ ಗಾರ್ದಭ, ಹುಲಿಗೆ ಬಲಿಯಾಗಿದ್ದು ದುರಂತ.ಚೀನಾದ ಜಿಯಾಂಗ್ಸು ಪೂರ್ವ ಪ್ರಾಂತ್ಯದ ಮೃಗಾಲಯದಲ್ಲಿ ನಡೆದ ಈ ಅಮಾನವೀಯ ದೃಶ್ಯ ಸಾಮಾಜಿಕ ಜಾಲತಾನಗಳಲ್ಲಿ ಹರಿದಾಡುತ್ತಿದ್ದು, ಪ್ರಾಣಿಪ್ರಿಯರು ತೀವ್ರ ಆಕ್ರೋಶಗೊಂಡಿದ್ದಾರೆ. ಇಂಥ ನೀಚ ಕೃತ್ಯ ಎಸಗಲು ದುರುಳರಿಗೆ ಹೇಗೆ ಮನಸ್ಸು ಬಂತು ಎಂದು ಪ್ರಶ್ನಿಸಿದ್ದಾರೆ. ಈ ಘಟನೆಗೆ ನ್ಯಾಯಾಲಯದ ಪ್ರಕರಣವೊಂದು ಕಾರಣವಾಗಿದೆ ಎಂದು ಮೃಗಾಲಯದ ಸಿಬ್ಬಂದಿ ನೊಂದು ನುಡಿದಿದ್ದಾರೆ.

https://www.youtube.com/watch?v=uwqIC5U3-0U

ಸಂಸ್ಥೆಯೊಂದರಲ್ಲಿ ಸಾಕಷ್ಟು ಹಣ ತೊಡಗಿಸಿದ್ದ ಹೂಡಿಕೆದಾರರಿಗೆ ಕಳೆದ ಎರಡು ವರ್ಷಗಳಿಂದ ಯಾವುದೇ ಲಾಭ ಬಂದಿರಲಿಲ್ಲ. ಈ ಬಗ್ಗೆ ಕೋರ್ಟ್‍ನಲ್ಲಿ ಕೇಸ್ ನಡೆಯುತ್ತಿತ್ತು. ಇದರಿಂದ ಕುಪಿತರಾದ ಗುಂಪೊಂದು ತಮ್ಮ ಆಕ್ರೋಶವನ್ನು ತೋರ್ಪಡಿಸಲು ಮತ್ತು ಸರ್ಕಾರದ ಗಮನಸೆಳೆಯಲು ಈ ಕೃತ್ಯ ಎಸಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin