ಹುಷಾರ್… ಈಗ ಎಲ್ಲೆಲ್ಲೂ ಪ್ಲಾಸ್ಟಿಕ್ ಮೊಟ್ಟೆಯದ್ದೇ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

Plastic-Egg

ಮಾಗಡಿ,ಜೂ.7- ಜನ ದುಡ್ಡು ಮಾಡಲು ಏನೇನೂ ಮಾಡುತ್ತಾರೆ ನೋಡಿ ಸ್ವಾಮಿ ಏನ್ ತಿನ್ಬೇಕು, ಏನ್ ಬಿಡ್ಬೇಕೋ ಗೊತ್ತಿಲ್ಲ. ಎಲ್ಲಾ ನಕಲಿ ಆಗ್ಬಿಟಿದೆ. ಆದ್ರೆ ಏನ್ಮಾಡೋದು ಹೊಟ್ಟೆ ತುಂಬಿಸಿಕೊಳ್ಳೊಕೆ ತಿನ್ಲೆಬೇಕಲ್ಲಾ.  ಅಂಗಡಿಯಿಂದ ತಂದ ಕೋಳಿ ಮೊಟ್ಟೆಗಳು ಪ್ಲಾಸ್ಟಿಕ್. ಇದನ್ನು ನೋಡಿ ದಂಗಾದ ಗೃಹಿಣಿಯರು. ಪಟ್ಟಣದ ಕಲ್ಯಾ ಬಾಗಿಲಿನ ಮಹಿಳಾಪರ ಹೋರಾಟಗಾರ್ತಿ ಲಕ್ಷ್ಮಿ ಅವರು ಅಂಗಡಿಯಿಂದ ಕೋಳಿ ಮೊಟ್ಟೆ ತಂದು ಬೇಯಿಸಿದ್ದಾರೆ. ಅದನ್ನು ತಿನ್ನಬೇಕು ಎಂದು ಮೊಟ್ಟೆ ಸುಲಿದಾಗ, ಪ್ಲಾಸ್ಟಿಕ್ ಮೊಟ್ಟೆ ಎಂದು ಬೆಳಕಿಗೆ ಬಂದಿದೆ. ಮೊಟ್ಟೆಯಲ್ಲಿರುವ ಹಳದಿ ಬಣ್ಣದ ಭಂಡಾರ ಕಲ್ಲಿನಂತಿದೆ ಹಾಗೂ ಮೆಲ್ಭಾಗದ ಪದರ ಎಳೆಎಳೆಯಾಗಿದ್ದು, ಇದು ಪ್ಲಾಸ್ಟಿಕ್ ಮೊಟ್ಟೆ ಇರಬಹುದೆಂದು ಅನುಮಾನ ಮನೆಮಾಡಿತ್ತು.ಇದು ಇವರೊಬ್ಬರ ಮನೆಯ ಮೊಟ್ಟೆ ಕಥೆಯಲ್ಲ. ಪಕ್ಕದ ಮನೆಯ ಗಾಯತ್ರಿ ಚಂದ್ರಾಚಾರ್ ಎಂಬ ಮಹಿಳೆ ಕೂಡ ಅಂಗಡಿಯಿಂದ ಕೋಳಿ ಮೊಟ್ಟೆ ತಂದಿದ್ದಾರೆ. ಅದೂ ಕೂಡ ಪ್ಲಾಸ್ಟಿಕ್ ಮೊಟ್ಟೆ ಎಂದು ತಿಳಿದು ಬಂದಿದೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮೊಟ್ಟೆಗಳನ್ನು ಪರಿ ಶೀಲಿಸಿ ಮೊಟ್ಟೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.  ವರದಿ ಬಂದ ನಂತರ ಮೊಟ್ಟೆಗಳು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿದು ಬರಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin