ಇಬ್ಬರು ಅಪಹೃತ ಶಿಕ್ಷಕರನ್ನು ನಿರ್ದಯವಾಗಿ ಹತ್ಯೆ ಮಾಡಿದ ಐಎಸ್ಐಎಸ್ ಕಿರಾತಕರು

ಈ ಸುದ್ದಿಯನ್ನು ಶೇರ್ ಮಾಡಿ

ISIS--01

ಕೈರೋ, ಜೂ.9-ಪಾಕಿಸ್ತಾನದಲ್ಲಿ ಇಬ್ಬರು ಅಪಹೃತ ಶಿಕ್ಷಕರನ್ನು ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನಿರ್ದಯವಾಗಿ ಕೊಂದು ಹಾಕಿದ್ದಾರೆ. ಇದರಿಂದಾಗಿ ಪಾಕಿಸ್ತಾನ ಮತ್ತು ಚೀನಾ ನಡುವೆ ಕುದುರುತ್ತಿದ್ದ ಸಂಬಂಧಕ್ಕೆ ಹೊಡೆತ ಬಿದ್ದಂತಾಗಿದೆ. ಕ್ವೆಟ್ಟಾದ ಪ್ರಾಂತ್ಯವೊಂದರಿಂದ ಮೇ 24ರಂದು ಪೊಲೀಸರ ಸೋಗಿನಲ್ಲಿ ಐಎಸ್ ಉಗ್ರರು ಇಬ್ಬರು ಚೀನಿ ಶಿಕ್ಷಕರನ್ನು ಅಪಹರಿಸಿದ್ದರು. ಪಾಕಿಸ್ತಾನದಲ್ಲಿ ನೆಲೆಸಿದ್ದ ಇವರನ್ನು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.



ಈ ಹತ್ಯೆ ವರದಿಗಳು ಆತಂಕ ಮೂಡಿಸಿವೆ. ಮಾಹಿತಿಯನ್ನು ಪರಿಶೀಲಿಸುವುದಾಗಿ ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಒಂದು ಪಟ್ಟಿ ಒಂದು ರಸ್ತೆ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 10 ಚೀನಿ ಕಾರ್ಮಿಕರನ್ನು ಉಗ್ರರು ಕಳೆದ ತಿಂಗಳು ಕೊಂದು ಹಾಕಿದ್ದರು. ಇದರ ಬೆನ್ನಲ್ಲೇ ಇಬ್ಬರು ಚೀನಿ ಶಿಕ್ಷಕರು ಹತ್ಯೆಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin