ಚೋಟಾ ಶಕೀಲ್ ಸಹಚರ ಜುನೇದ್ ಚೌಧರಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Chota-shakeel--01

ನವದೆಹಲಿ,ಜೂ.9-ಪಾಕ್ ಮೂಲದ ಲೇಖಕ ತಾರೀಕ್ ಪತ್ವಾ ಕೊಲೆ ಬೆದರಿಕೆ ಸಂಬಂಧ ಭೂಗತ ಜಗತ್ತಿನ ಕುಖ್ಯಾತ ಡಾನ್ ಚೋಟಾ ಶಕೀಲ ಸಹಚರ ಜುನೇದ್ ಚೌಧರಿಯನ್ನು ದೆಹಲಿ ಪೊಲೀಸ್ ವಿಶೇಷ ಪಡೆ ಬಂಧಿಸಿದೆ.  ಉತ್ತರ-ಪೂರ್ವ ದೆಹಲಿಯ ವಾಜಿರ್‍ಬಾದ್ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಉಪಪೊಲೀಸ್ ಆಯುಕ್ತ(ವಿಶೇಷ ಪಡೆ) ಪಿ.ಎಸ್.ಋಸ್ವಾ ತಿಳಿಸಿದ್ದಾರೆ.



ಲೇಖಕ ತಾರೀಕ್ ಪತ್ವ ಅವರು ವಿವಾದಾತ್ಮಕ ಬರಹ ಬರೆದಿದ್ದರು. ಹೀಗಾಗಿ ಜುನೇದ್ ಚೌಧರಿ, ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು. ಶಕೀಲ್‍ನಿಗೆ ಹವಾಲಾ ಹಣ ಸಂದಾಯ ಮಾಡಿದ ಪ್ರಕರಣ ಸಂಬಂಧ ಕಳೆದ ವರ್ಷ ಜೂನ್‍ನಲ್ಲಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ. ಅಲ್ಲದೆ ಹಿಂದೂಸಭಾ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಕೊಲೆ ಮಾಡಲು ಸಂಚು ರೂಪಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin