ಜಗತ್ತಿನ ಟಾಪ್ 200 ವಿವಿಗಳಲ್ಲಿ ಬೆಂಗಳೂರು-ಮುಂಬೈ-ದೆಹಲಿಗೆ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

IIT-Mumbai--0011

ನವದೆಹಲಿ, ಜೂ.8- ವಿಶ್ವದ ಪ್ರಸಿದ್ಧ ಟಾಪ್ 200 ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ),ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಹಾಗೂ ದೆಹಲಿಯ ಭಾರತೀಯ ತಂತ್ರಜ್ಞಾನ ವಿವಿಗಳು ಸ್ಥಾನ ಪಡೆದಿವೆ.  ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಐಐಟಿ-ಮುಂಬೈ 219ನೇ ಸ್ಥಾನದಿಂದ 179ನೇ ಸ್ಥಾನಕ್ಕೆ ಜಿಗಿದು ಸ್ಥಾನ ಪಡೆದರೆ, ಐಐಟಿ ದೆಹಲಿ 172ನೇ ಸ್ಥಾನದಿಂದ 185ನೇ ಸ್ಥಾನ ಇಳಿದಿದೆ. ಇನ್ನು ಐಎಎಸ್ಸಿ ಬೆಂಗಳೂರು ವಿವಿಯು 152ನೇ ಸ್ಥಾನದಿಂದ 190ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಇನ್ನು ಟಾಪ್ ವಿವಿ ಎನಿಸಿಕೊಂಡಿದ್ದ ಐಐಎಸ್‍ಸಿ ಬೆಂಗಳೂರು 190ನೇ ಸ್ಥಾನಕ್ಕೆ ಕುಸಿತವಾಗಿರುವುದು ದುರದೃಷ್ಟಕರ. ಆದರೆ ಜಗತ್ತಿನ ಟಾಪ್-200 ವಿವಿಗಳಲ್ಲಿ ಭಾರತದ ಪ್ರತಿಷ್ಠಿತ ವಿವಿಗಳು ಸ್ಥಾನ ಪಡೆದಿರುವುದು ಸಮಾಧಾನಕರ ಸಂಗತಿ.   ದೇಶದ ಪ್ರತಿಷ್ಠಿತ 5 ವಿವಿಗಳಲ್ಲಿ ತರಗತಿ, ಬೋಧನೆ ಹಾಗೂ ಕಾರ್ಪೊರೇಟರ್ ಗಳ ಒಡಂಬಡಿಕೆಯಿಂದ ಶೈಕ್ಷಣಿಕ ವಿಷಯಗಳ ಕುರಿತು ಸಮೀಕ್ಷೆ ನಡೆಸಲಾಯಿತು ಎಂದು ಕ್ಯೂಎಸ್ ಸಮೀಕ್ಷೆ ನಿರ್ದೇಶಕ ಬೆನ್‍ಸೌಟರ್ ತಿಳಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin