ಟ್ರಾನ್ಸ್’ಫಾರ್ಮರ್ ಗಳು ಸುಟ್ಟುಹೋದರೆ ಮೂರೇ ದಿನದಲ್ಲಿ ಆಗುತ್ತೆ ರಿಪೇರಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakuamr-DKS

ಬೆಂಗಳೂರು,ಜೂ.9-ವಿದ್ಯುತ್ ಟ್ರಾನ್ಸ್‍ಫಾರ್ಮ್‍ಗಳು ಸುಟ್ಟುಹೋದ ಮೂರು ದಿನದಲ್ಲೇ ದುರಸ್ತಿ ಮಾಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು. ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 3.60 ಲಕ್ಷ ಕೃಷಿ ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಲಾಗಿದೆ. ಇನ್ನು 96 ಸಾವಿರ ಕೃಷಿ ಪಂಪ್‍ಸೆಟ್ ಸಕ್ರಮ ಮಾಡಬೇಕು. ಪ್ರತಿ ರೈತರಿಗೆ ಇಂಧನ ಇಲಾಖೆಯಿಂದ 50ರಿಂದ ಒಂದು ಲಕ್ಷದವರೆಗೆ ಪಂಪ್‍ಸೆಟ್ ಸಕ್ರಮದ ಮಾಡಲು ಖರ್ಚಾಗುತ್ತದೆ ಎಂದರು.ಮೊಳಕಾಲ್ಮೂರಿನಲ್ಲಿ 2005 ಮತ್ತು 2012ರವರೆಗೂ 803 ಕೃಷಿ ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಲಾಗಿದೆ.   ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್‍ಚ್ಛಕ್ತಿ ಸರಬರಾಜು ನಿಯಂತ್ರಣ ನಿಯಮಾವಳಿ ಪ್ರಕಾರ ಗ್ರಾಮ ಮಿತಿ ಮತ್ತು ಪಟ್ಟಣ ಪಂಚಾಯಿತಿ ಮಿತಿಯೊಳಗೆ ಬರುವ ರೆವಿನ್ಯೂ ನಿವೇಶನಗಳಲ್ಲಿ ಒಂದು ಕಿಲೋ ವ್ಯಾಟ್ ವಿದ್ಯುತ್‍ಗೆ ಮೂರು ಸಾವಿರ ರೂ. ಶುಲ್ಕ ವಿಧಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಕೃಷ್ಣಾರೆಡ್ಡಿ ಪ್ರಶ್ನೆಗೆ ಉತ್ತರಿಸಿದರು.   ಸ್ಥಳದ ಮಾಲೀಕತ್ವದ ರುಜುವಾತು ಪತ್ರ ಸ್ಥಳೀಯ ಪ್ರಾಧಿಕಾರದಿಂದ ಪರವಾನಗಿ ಪತ್ರ ಮತ್ತಿತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin