ತಲಕಾವೇರಿ ಸೂಕ್ಷ್ಮ ಪರಿಸರ ತಾಣ ಘೋಷಣೆಗೆ ಗ್ರಾಮಸ್ಥರ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ಕೊಡಗು,ಜೂ.9-ಮಡಿಕೇರಿ ತಾಲ್ಲೂಕು ಭಾಗಮಂಡಲ ವನ್ಯಜೀವಿಗಳ ಪ್ರದೇಶವಾಗಿರುವ ತಲಕಾವೇರಿಯನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಇಂದು ಪ್ರತಿಭಟನೆ ನಡೆಸಿದರು.   ಕೇಂದ್ರ ಸರ್ಕಾರ ಭಾಗಮಂಡಲ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಣೆ ಮಾಡಿದ್ದು , ಅಧಿಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಭಾಗಮಂಡಲ ವಾಸಿಗಳು ರಸ್ತೆ ತಡೆ ನಡೆಸಿದರಲ್ಲದೆ ಅಂಗಡಿಮುಂಗಟ್ಟು ಮುಚ್ಚಿ ಬಂದ್ ಆಚರಿಸಿದರು.   ಭಾಗಮಂಡಲ-ಮಡಿಕೇರಿ ನಡುವಿನ ರಸ್ತೆಯನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿದ್ದು , ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನೆಯಿಂದಾಗಿ ಪ್ರವಾಸಿ ತಾಣಕ್ಕೆ ಆಗಮಿಸಿದ್ದರು.

Facebook Comments

Sri Raghav

Admin