ಮೂವರು ದರೋಡೆಕೋರರ ಸೆರೆ: 3 ಪಿಸ್ತೂಲು, 20ಕೆಜಿ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಜೂ.9- ಬೆಳಗಿನ ಜಾವ ಬೈಕ್‍ಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಗೋಲ್‍ಗುಂಬಜ್ ಠಾಣೆ ಪೊಲೀಸರು ಮೂರು ಪಿಸ್ತೂಲು ಹಾಗೂ 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.  ಆಂಧ್ರ ಮೂಲದ ವ್ಯಕ್ತಿ ಸೇರಿದಂತೆ ಮೂವರು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಬೈಕ್‍ಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು.


ರಾತ್ರಿ ಗಸ್ತಿನಲ್ಲಿದ್ದ ಗೋಲ್‍ಗುಂಬಜ್ ಪೊಲೀಸರು ಇವರ ನಡೆ ಬಗ್ಗೆ ಅನುಮಾನಗೊಂಡು ಅವರನ್ನು ಬೆನ್ನಟ್ಟಿ ಹಿಡಿದು ಮೂರು ಕಂಟ್ರಿ ಪಿಸ್ತೂಲ್ ಮತ್ತು 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಠಾಣೆಯಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin