ಹಾಲಿ ಶಾಸಕರ ಹೇಳಿಕೆಗೆ ವೇದಿಕೆಯಲ್ಲೇ ಕೌಂಟರ್ ನೀಡಿದ ಮಾಜಿ ಶಾಸಕದ್ವಯರು..!

ಈ ಸುದ್ದಿಯನ್ನು ಶೇರ್ ಮಾಡಿ

Bangarapet

ಬಂಗಾರಪೇಟೆ, ಜೂ.6- ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘದ ಸಹಾಯ ಗುಂಪುಗಳಿಗೆ ವಿತರಣೆ ಮಾಡುತ್ತಿರುವ ಹಣ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಲ್ಲ ಎಂದು ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆಗೆ ಮಾಜಿ ಶಾಸಕದ್ವಯರಾದ ಎಂ.ನಾರಾಯಣಸ್ವಾಮಿ ಮತ್ತು ಬಿ.ಪಿ.ವೆಂಕಟಮುನಿಯಪ್ಪ ವೇದಿಕೆ ಮೇಲೆ ತಿರುಗೇಟು ನೀಡುವ ಮೂಲಕ ಕೇಂದ್ರ ಸರ್ಕಾರದಿಂದ ನಬಾರ್ಡ್ ಮೂಲಕ ಹಣ ನೀಡಲಾಗುತ್ತಿದೆ ಎಂದು ತಿರುಗೇಟು ನೀಡಿದರು.ನಗರದ ಜೂನಿಯರ್ ಕಾಲೇಜ್ ಮುಂಭಾಗ ಮೈದಾನದಲ್ಲಿ ಸ್ತ್ರೀ ಸಂಘಗಳಿಗೆ 16.64 ಕೋಟಿ ರೂ ಸಾಲ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮಾತನಾಡಿದ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನಬಾರ್ಡ್ ಮೂಲಕ ಹಣವನ್ನು ನೀಡಲಾಗುತ್ತಿದೆ.ಆದರೆ ಕೇಂದ್ರ ಸರ್ಕಾರ ದಿಂದ ಹಣ ನೀಡುತ್ತಿಲ್ಲ ಎಂದು ಹೇಳಿ, ತಾವು ಪಡೆದುಕೊಳ್ಳುವ ಸಾಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡ್ಡಿಯನ್ನು ಪಾವತಿ ಮಾಡುತ್ತಿದೆ ಎಂದರು. ರೈತರು, ಮಹಿಳೆಯರು ಹಾಗೂ ಹೈನುಗಾರಿಕೆ ಮಾಡುವವರಿಗೂ ನೆರವಾಗಿದ್ದಾರೆ ಎಂದರು.

ನಂತರದ ಸರದಿಯಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಮತ್ತೊಬ್ಬ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡುವಾಗ, ಹಾಲಿ ಶಾಸಕರ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಮಹಿಳೆಯರು ಆರ್ಥಿಕವಾಗಿ ಬಲಿಷ್ಠಗೊಳ್ಳಲು ನಬಾರ್ಡ್ ಬ್ಯಾಂಕ್‍ಗೆ ನೀಡುವ ಹಣವನ್ನು ಡಿಸಿಸಿ ಬ್ಯಾಂಕ್ ಮೂಲಕ ಸಾಲ ವಿತರಣೆ ಮಾಡಲಾಗುತ್ತಿದೆ.ನಬಾರ್ಡ್ ಬ್ಯಾಂಕ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವಾಗ, ಹಣ ವಿತರಣೆಗೆ ಕೇಂದ್ರ ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಹೇಳುವುದು ಸರಿಯೇ ಎಂದು ಟಾಂಗ್ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಹಾಲಿ ಮತ್ತು ಮಾಜಿ ಶಾಸಕರು ಡಿಸಿಸಿ ಬ್ಯಾಂಕ್ ಅಭಿವೃದ್ದಿ ನೀಡುತ್ತಿರುವ ಎಲ್ಲಾ ರೀತಿಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.ಉಪಾಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿದರು.  ಟಿಎಪಿಸಿಎಂಎಸ್ ಅಧ್ಯಕ್ಷ ಮಾರ್ಕಂಡೇಗೌಡ, ಜಿಪಂ ಸದಸ್ಯರಾದ ಮಹೇಶ್, ಪಾರ್ವತಮ್ಮ ನಾಗರಾಜ್, ಮಾಲಾ ಶ್ರೀನಿವಾಸಗೌಡ, ಬ್ಯಾಂಕ್ ಕಾರ್ಯದರ್ಶಿಗಳಾದ ಆಲಂಬಾಡಿ ಜ್ಯೋತೇನಹಳ್ಳಿ ವಿ.ರಮೇಶ್, ಹುಣಸಿನಹಳ್ಳಿ ವಿ.ಚಂದ್ರಪ್ಪ, ಬೂದಿಕೋಟೆ ಚಂದ್ರಶೇಖರ್‍ಗೌಡ, ಚಿಕ್ಕಂಕಂಡಹಳ್ಳಿ ಶ್ರೀನಿವಾಸ್, ಹುಲಿಬೆಲೆ ಜಿ.ವಿ.ರಾಮಪ್ಪ, ಡಿಸಿಸಿ ಬ್ಯಾಂಕ್ ನಿದೇಶಕ ಹುನಮಂತಪ್ಪರೆಡ್ಡಿ, ಶಿವಾರೆಡ್ಡಿ ಇದ್ದರು.

Facebook Comments

Sri Raghav

Admin