ಬದರಿನಾಥ್‍ನಲ್ಲಿ ಹೆಲಿಕಾಪ್ಟರ್ ಪತನಗೊಂಡು ಎಂಜಿನಿಯರ್ ಸಾವು, ಪೈಲೆಟ್‍ಗಳಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Helicoptor--001

ಡೆಹ್ರಾಡೂನ್/ನವದೆಹಲಿ, ಜೂ.10-ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡು ಎಂಜಿನಿಯರ್ ಮೃತಪಟ್ಟು, ಇಬ್ಬರು ಪೈಲೆಟ್‍ಗಳಿಗೆ ಗಂಭೀರ ಗಾಯಗಳಾಗಿರುವ ದುರಂತ ಉತ್ತರಾಖಂಡದ ಬದರಿನಾಥ್‍ನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ದುರ್ಘನಟೆಯಲ್ಲಿ ಎಲ್ಲ ಐವರು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.   ಪ್ರಸಿದ್ಧ ಬದರಿನಾಥ್ ಮಂದಿರದ ಬಳಿಯಿಂದ ಹರಿದ್ವಾರಕ್ಕೆ ಯಾತ್ರಿಗಳನ್ನು ಕರೆದೊಯ್ಯಲು ಮೇಲೇರಿದ ಸ್ವಲ್ಪ ಹೊತ್ತಿನಲ್ಲೇ ಹೆಲಿಕಾಪ್ಟರ್ ಪತನಗೊಂಡಿತು. ಈ ದುರಂತದಲ್ಲಿ ಹೆಲಿಕಾಪ್ಟರ್ ಸಿಬ್ಬಂದಿಯೂ ಆದ ಎಂಜಿನಿಯರ್ ಮೃತಪಟ್ಟು, ಇಬ್ಬರು ಪೈಲೆಟ್‍ಗಳು ಗಾಯಗೊಂಡರು ಎಂದು ದೆಹಲಿಯ ನಾಗರಿಕ ವಾಯಯಾನ ಮಹಾ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಹೆಲಿಕಾಪ್ಟರ್‍ನ ರೋಟರ್ ಬ್ಲೇಡ್‍ಗಳು ಅಪ್ಪಳಿಸಿ ಎಂಜಿನಿಯರ್ ದುರಂತ ಸಾವಿಗೀಡಾಗಿದ್ದಾರೆ ಎಂದು ಚಮೋಲಿ ಪೊಲೀಸ್ ವರಿಷ್ಠಾಧಿಕಾರಿ ತೃಪ್ತಿ ಭಟ್ ತಿಳಿಸಿದ್ದಾರೆ.   ಅಗಸ್ಟಾ-119 ಹೆಲಿಕಾಪ್ಟರ್ ಮುಂಬೈ ಮೂಲದ ಖಾಸಗಿ ಸಂಸ್ಥೆಯಾದ ಕ್ರೆಸ್ಟಲ್ ಏವಿಯೇಷನ್ ಸಂಸ್ಥೆಗೆ ಸೇರಿದೆ. ಇಂದು ಬೆಳಗ್ಗೆ 7.45ರಲ್ಲಿ ಮೇಲೇರಿದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿತು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಮೇಲೇರುವಾಗ ವಾಯು ಒತ್ತಡ ಸಮಸ್ಯೆಯಿಂದಾಗಿ ಸಮತೋಲನ ಕಳೆದುಕೊಂಡು ಪತನಗೊಂಡಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin