ಬೆಂಗಳೂರನ್ನು ಗೂಂಡಾ ಮುಕ್ತ ನಗರವನ್ನಾಗಿಸಲು ಪೊಲೀಸರಿಗೆ ಸಿದ್ದರಾಮಯ್ಯ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Police--01

ಬೆಂಗಳೂರು, ಜೂ.10- ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಬೆಂಗಳೂರು ಮಹಾನಗರವನ್ನು ಗೂಂಡಾ ಮುಕ್ತ ನಗರವನ್ನಾಗಿ ಮಾಡಬೇಕು. ಇದಕ್ಕಾಗಿ ಪೊಲೀಸರು ಸಂಕಲ್ಪ ತೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.  ಸಿಲಿಕಾನ್ ಸಿಟಿಯ ಭದ್ರತೆಗಾಗಿ ಅತ್ಯಾಧುನಿಕ ಕಮಾಂಡೆಂಟ್ ಸೆಂಟರ್, ನಮ್ಮ -100 ವೈಯಕ್ತಿಕ ಭದ್ರತಾ ರಕ್ಷಕ 2್ಡ47 ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಪರಾಧ ಮುಕ್ತ ಸಮಾಜ ಮಾಡಲು ಸಾಧ್ಯವಿಲ್ಲ. ಆದರೆ ಗೂಂಡಾ ಮುಕ್ತ ಸಮಾಜವನ್ನು ಮಾಡಬಹುದು. ಇನ್ಸ್‍ಪೆಕ್ಟರ್‍ಗಳು, ಎಸಿಪಿಗಳು ಮನಸ್ಸು ಮಾಡಿದರೆ ಈ ಕೆಲಸವನ್ನು ಮಾಡಬಹುದು. ಇದಕ್ಕೆ ಬಿಗ್ ಟಾಸ್ಕ್ ಏನು ಬೇಕಾಗಿಲ್ಲ ಎಂದು ತಿಳಿಸಿದರು.


ಬೆಂಗಳೂರು ಮಹಾನಗರ ಐಟಿ ಸಿಟಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಮೋಸ್ಟ್ ಡೈನಮಿಕ್ ಸಿಟಿ ಎಂದು ಎಕನಾಮಿಕ್ ಸರ್ವೆಯಲ್ಲೂ ಕೂಡ ಹೇಳಿದೆ. ಗುಣಾತ್ಮಕ ಬದಲಾವಣೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  ಹೊಯ್ಸಳ, ಪಿಂಕ್ ಹೊಯ್ಸಳ ಸೇವೆಯನ್ನು ಒದಗಿಸಲಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಅಮಾಯಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಾಗರಿಕರಿಗೆ ರಕ್ಷಣೆ ಕೊಡಬೇಕಾದ ಹೊಣೆಗಾರಿಕೆ ಪೊಲೀಸರ ಮೇಲೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ 1.10 ಕೋಟಿ ಜನರಿದ್ದಾರೆ. 30 ರಿಂದ 40 ಲಕ್ಷ ಜನ ಬಂದು-ಹೋಗುವವರಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಪಾಠ ಕಲಿಸಬೇಕು. ಎಲ್ಲರಿಗೂ ರಕ್ಷಣೆ ಒದಗಿಸಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಆಧುನಿಕತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಯಾವುದೇ ಆಧುನಿಕ ಉಪಕರಣಗಳು ಬಂದರೂ ಅದರ ಸೌಲಭ್ಯ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ನಮ್ಮ -100 ವೈಯಕ್ತಿಕ ಭದ್ರತಾ ರಕ್ಷಕ 2್ಡ47 ಸೇವೆಯನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಇಲಾಖೆಯ ಅಧಿಕಾರಿಗಳೊಂದಿಗೆ ಲಂಡನ್‍ಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ದೂರುಗಳ ಕರೆಗಳನ್ನು 4 ಸೆಕೆಂಡ್‍ಗಳಲ್ಲಿ ಸ್ವೀಕರಿಸುತ್ತಾರೆ. 12 ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಧಾವಿಸಿ ರಕ್ಷಣೆ ನೀಡುತ್ತಾರೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಬರಬೇಕು. ಬೆಂಗಳೂರು ನಗರವನ್ನು ಸೇಫ್ ಸಿಟಿ ಮಾಡಬೇಕು. ಇಲಾಖಾ ಸಿಬ್ಬಂದಿ ಜನರೊಂದಿಗೆ ಸಂಯಮದಿಂದ ವರ್ತಿಸಬೇಕು ಎಂದು ಹೇಳಿದರು.


ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ಮಾತನಾಡಿ, 272 ಹೊಯ್ಸಳ ಸೇರ್ಪಡೆಗೊಂಡಿವೆ. ಪಿಂಕ್ ಹೊಯ್ಸಳ ಕೂಡ ಕರ್ತವ್ಯ ನಿರ್ವಹಿಸುತ್ತಿವೆ. ಸುರಕ್ಷಾ ಆ್ಯಪ್ ಕೂಡ ಬಿಡುಗಡೆ ಮಾಡಲಾಗಿದೆ. ಪಿಂಕ್ ಹೊಯ್ಸಳ ಉದ್ಘಾಟನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕರೆ ಬಂದರೂ ಕಾಲ್‍ಸೆಂಟರ್‍ನಲ್ಲಿ ಕರೆ ಸ್ವೀಕರಿಸುವುದಿಲ್ಲ ಎಂಬ ಆರೋಪ ಮಾಡಿದ್ದರು. ಈಗ ವ್ಯವಸ್ಥೆ ಸಾಕಷ್ಟು ಬದಲಾಗಿದೆ ಎಂದರು. ಮೊದಲು ಐದು ಉಪಕರಣಗಳಿದ್ದವು. ಈಗ 100 ಉಪಕರಣಗಳನ್ನು ಅಳವಡಿಸಲಾಗಿದೆ. 15 ಸೆಕೆಂಡ್‍ಗಳಲ್ಲಿ ಕರೆ ಸ್ವೀಕರಿಸಿ 15 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಗೆ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ನಿಮ್ಮ ದೂರು ನಮ್ಮ ದೂರು ಎಂಬ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.  ನಗರಾಭಿವೃದ್ದಿ ರೋಷನ್‍ಬೇಗ್, ಪೆÇಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್‍ಚಂದ್ರ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin