ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ‘ಕುರಿ’ಗಳ ಸಂಖ್ಯೆ ಹೆಚ್ಚಳ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು, ಜೂ.10- ಕಾಕತಾಳಿಯವೋ ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲೇ ರಾಜ್ಯದಲ್ಲಿ ಕುರಿಗಳ ಸಂಖ್ಯೆ ಹೆಚ್ಚಳವಾಗಿದೆಯಂತೆ..!
ಹೌದು, ವಿಧಾನಸಭೆಯಲ್ಲಿ ಸರ್ಕಾರವೇ ನೀಡಿರುವ ಮಾಹಿತಿಗಳ ಪ್ರಕಾರ ಕರ್ನಾಟಕದಲ್ಲಿರುವ ಪ್ರಾಣಿಗಳ ಸಂಖ್ಯೆಯಲ್ಲಿ ಕುರಿಗಳಿಗೆ ಅಗ್ರಸ್ಥಾನ. ರಾಜ್ಯದಲ್ಲಿ 95.83 ಲಕ್ಷ ಕುರಿಗಳಿವೆ. 95.16 ಲಕ್ಷ ಸಂಖ್ಯೆಯೊಂದಿಗೆ ಹಸುಗಳು ಎರಡನೇ ಸ್ಥಾನದಲ್ಲಿವೆ. 2012ರ ಪ್ರಾಣಿಗಣತಿಯಂತೆ ಒಟ್ಟು 2.09 ಕೋಟಿ ಪ್ರಾಣಿಗಳಿವೆ. ಪಶುಸಂಗೋಪನೆ ಸಚಿವ ಎ.ಮಂಜು ಅವರು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿಧಾನಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದು, ರಾಜ್ಯದಲ್ಲಿರುವ ಪ್ರಾಣಿಗಳ ಅಂಕಿಅಂಶ ವಿವರಗಳನ್ನು ಒದಗಿಸಿದ್ದಾರೆ.ಕುರಿ ಮತ್ತು ಹಸುಗಳ ನಂತರ ಮೇಕೆ ಮೂರನೇ ಸ್ಥಾನದಲ್ಲಿವೆ. ರಾಜ್ಯದಲ್ಲಿರುವ ಆಡುಗಳ ಸಂಖ್ಯೆ 47.96 ಲಕ್ಷ. ಉಳಿದಂತೆ ಎಮ್ಮೆಗಳು-34.70 ಲಕ್ಷ, ಶ್ವಾನಗಳು-12,75 ಲಕ್ಷ ಹಾಗೂ ಹಂದಿಗಳು-3.04 ಲಕ್ಷದಷ್ಟಿವೆ. ರಾಜ್ಯದಲ್ಲಿ 23,558 ಮೊಲಗಳು, 16,312 ಕತ್ತೆಗಳು, 12,976 ಕುದುರೆಗಳು, 208 ಸಾಕು ಆನೆಗಳು ಹಾಗೂ 151 ಒಂಟೆಗಳಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಜುಲೈ 16 ರಿಂದ ಅಕ್ಡೋಬರ್ 15ರವರೆಗೆ ರಾಜ್ಯದಲ್ಲಿ ಮುಂದಿನ ಜಾನುವಾರು ಗಣತಿ ನಡೆಯಲಿದೆ ಎಂದು ಅವರು ಪಶುಸಂಗೋಪನಾ ಸಚಿವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin