ಹೆಚ್ಡಿಕೆ ವಿರುದ್ಧ ಲಂಚ ಆರೋಪ : ಸಾಕ್ಷಿ ಒದಗಿಸಲು ಕಾಲಾವಕಾಶ ಕೇಳಿದ ಜನಾರ್ಧನ ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--01

ಬಳ್ಳಾರಿ, ಜೂ.10- ಜಂತ್ಕಲ್ ಗಣಿಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ 150 ಕೋಟಿ ರೂ. ಲಂಚ ಆರೋಪ ಮಾಡುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಬಳಿ ನಿಜಕ್ಕೂ ಈ ಹಗರಣಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳು ಇವೆಯೇ? ಇಂತಹ ಒಂದು ಅನುಮಾನ ಈಗ ಸುಳಿದಾಡತೊಡಗಿದೆ. ಕಾರಣ 150 ಕೋಟಿ ರೂ. ಹಗರಣದ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಸಾಕ್ಷ್ಯಾಧಾರ ಸಲ್ಲಿಸಿ ದಾಖಲೆಗಳನ್ನು ನೀಡಲು ಜನಾರ್ಧನ ರೆಡ್ಡಿ ವಿಳಂಬ ಮಾಡುತ್ತಿರುವುದು. ನಿಗದಿತ ದಿನಾಂಕದಂದು ಸಾಕ್ಷ್ಯಾಧಾರ ಸಲ್ಲಿಸಲು ರೆಡ್ಡಿ ಎಸ್‍ಐಟಿ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು.


ನಂತರ ನಿನ್ನೆ ಎಲ್ಲ ಸಾಕ್ಷ್ಯಾಧಾರಗಳನ್ನು ಸಲ್ಲಿಸುವುದಾಗಿ ಎಸ್‍ಐಟಿಗೆ ತಿಳಿಸಿದ್ದರು. ಆದರೆ ಮತ್ತೆ ಸಾಕ್ಷ್ಯಾಧಾರಗಳ ಸಲ್ಲಿಕೆಗೆ ಜೂ.13ರವರೆಗೆ ಕಾಲಾವಕಾಶ ಕೋರಿದ್ದಾರೆ ಎಂದು ಅವರ ನಿಕಟ ಮೂಲಗಳಿಂದ ತಿಳಿದುಬಂದಿದೆ.  ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ನಿಜವಾಗಿಯೂ ರೆಡ್ಡಿ ಬಳಿ ಜಂತ್ಕಲ್ ಗಣಿಗಾರಿಕೆಗೆ 150 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ದೂರಿಗೆ ಸಾಕ್ಷ್ಯಾಧಾರಗಳಿವೆಯೇ ಎಂಬ ಅನುಮಾನ ಮೂಡತೊಡಗಿದೆ.

ಒಂದು ವೇಳೆ ರೆಡ್ಡಿ ಬಳಿ ಸಾಕ್ಷ್ಯಾಧಾರಗಳಿದ್ದರೆ ಎಸ್‍ಐಟಿಗೆ ಸಲ್ಲಿಸಲು ಹೀಗೆ ಮೀನಾ-ಮೇಷ ಎಣಿಸುತ್ತಿರುವುದು, ಕೋರ್ಟ್‍ಗೆ ಹಾಜರಾಗಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.  ಈ ಹಿಂದೆ ಕುಮಾರಸ್ವಾಮಿ ಅವರು 150 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಜನಾರ್ಧನ ರೆಡ್ಡಿ ಸಿಡಿಯೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿನ ಸತ್ಯಾಸತ್ಯತೆಗಳು ಇದುವರೆಗೂ ಸ್ಪಷ್ಟವಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin