2021ರ ವೇಳೆಗೆ ಭಾರತದಲ್ಲಿ 83 ಕೋಟಿ ದಾಟಲಿದೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ…!

ಈ ಸುದ್ದಿಯನ್ನು ಶೇರ್ ಮಾಡಿ

Internet-Users

ನವದೆಹಲಿ, ಜೂ.10- ಮುಂಬರುವ ದಿನಗಳಲ್ಲಿ ಭಾರತದ ಇಂಟರ್‍ನೆಟ್ ( ಅಂತರ್ಜಾಲ) ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಲಿದೆ ಎಂದು ಹೇಳಲಾಗುತ್ತಿದೆ. 2016ರಲ್ಲಿ 37 ಕೋಟಿ(ಶೇ.28) ಇದ್ದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ಎರಡು ಪಟ್ಟಿಗಿಂತಲೂ ಅಧಿಕವಾಗಲಿದ್ದು , 83 ಕೋಟಿ ದಾಟುವ ಸಾಧ್ಯತೆ ಇದೆ ಎಂದು ಸಿಸ್ಕೊ ವಿಷುವಲ್ ನೆಟ್‍ವರ್ಕಿಂಗ್ ಇಂಡೆಕ್ಸ್ (ವಿಎನ್‍ಐ ) ಅಧ್ಯಯನ ವರದಿ ತಿಳಿಸಿದೆ.  ಅಂತರ್ಜಾಲ ಬಳಕೆದಾರರ ಸಂಖ್ಯೆ ಇದೇ ವೇಗದಲ್ಲಿ ಬೆಳೆದರೆ ಅದು ಶೇ.60ನ್ನು ದಾಟಲಿದೆ. ಅಲ್ಲದೆ 2016ರಲ್ಲಿ ದೇಶದಲ್ಲಿ 140 ಕೋಟಿ ನೆಟ್‍ವರ್ಕಿಂಗ್ ಡಿವೈಸ್‍ಗಳು ಇದ್ದವು. ಇವುಗಳ ಸಂಖ್ಯೆ 2021ರ ವೇಳೆಗೆ 200 ಕೋಟಿಗೂ ಮೀರಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ.ಬರುವ ಐದು ವರ್ಷಗಳಲ್ಲಿ ಇಂಟರ್‍ನೆಟ್ ಪ್ರೊಟೊಕಾಲ್ ಟ್ರಾಫಿಕ್ ನಾಲ್ಕು ಪಟ್ಟು ಹೆಚ್ಚುವ ಸಾಧ್ಯತೆ ಇದೆ. ಅಂದರೆ ವಾರ್ಷಿಕ ಸಾರಾಸಗಟು ಶೇ.30ರ ಅಭಿವೃದ್ದಿ ಹೊಂದುತ್ತದೆ.   ತ್ವರಿತವಾದ ಅಧಿಕ ಬ್ಯಾಂಡ್‍ವಿಡ್ತ್ ಡೆಟಾ, ವಿಡಿಯೋ, ಅಡ್ವಾನ್ಸ್ಡ್ ಅಪ್ಲಿಕೇಷನ್‍ಗಳಂತಹ ಮೊಬೈಲ್, ವೈಫೈ ಟ್ರಾಫಿಕ್‍ಗಳು ವೃದ್ದಿಸಲು ಇದು ನೆರವಾಗುತ್ತದೆ ಎಂದು ಸಿಸ್ಕೊ ಇಂಡಿಯಾ, ಸಾರ್ಕ್ ಸರ್ವೀಸ್ ಪ್ರೊವೈಡರ್ ಬ್ಯುಸಿನೆಸ್ ಮ್ಯಾನೇಜಿಂಗ್ ಡೈರಕ್ಟರ್ ಸಂಜಯ್ ಕೌಲ್ ತಿಳಿಸಿದ್ದಾರೆ.

ಮೊಬೈಲ್ ಅಪ್ಲಿಕೇಷನ್‍ಗಳ ಬಳಕೆ, ಕನೆಕ್ಟಿವಿಟಿ(ಸಂಪರ್ಕ) ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂಬರುವ ದಿನಗಳಲ್ಲಿ ಬಳಕೆಯಲ್ಲಿ ಬರುವ 4.5 ಜಿ , 5ಜಿ ನೆಟ್‍ವರ್ಕ್‍ಗಳಿಂದಾಗಿ ಇಂಟರ್‍ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ವೃದ್ಧಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಕೌಲ್.  ಈ ಅಂದಾಜಿನ ಪ್ರಕಾರ 2016ರಲ್ಲಿ ಐಪಿ ಟ್ರಾಫಿಕ್ 1 ಜಿಗಾ ಬೈಟ್ಸ್ ಇದ್ದರೆ 2021ರಲ್ಲಿ ಐದು ಜಿಗಾ ಬೈಟ್ಸ್‍ಗೆ ಏರಿಕೆಯಾಗುತ್ತದೆ. 2021ರ ವೇಳೆಗೆ ಫಿಕ್ಸ್ಡ್ ಬ್ರಾಡ್‍ಬ್ಯಾಂಡ್‍ನ ಒಟ್ಟು ವೇಗ 6.6 ಎಂಬಿಪಿಎಸ್‍ನಿಂದ 18.2 ಎಂಬಿಪಿಎಸ್‍ವರೆಗೆ ಹೆಚ್ಚುತ್ತದೆ.2021ರ ವೇಳೆಗೆ ಮೊಬೈಲ್ ಡೆಟಾ ಟ್ರಾಫಿಕ್ 7 ಪಟ್ಟು ವೃದ್ದಿಸಲಿದೆ. ಸ್ಮಾರ್ಟ್ ಮೀಟರ್, ಪ್ಯಾಕೇಜ್ ಟ್ರಾಕಿಂಗ್, ಡಿಜಿಟಲ್ ಹೆಲ್ತ್ ಮಾನಿಟರ್ಸ್ , ನೆಕ್ಸ್ಟ್ ಜನರೇಷನ್ ಎಂ2ಎಂ ಸೇವೆಗಳನ್ನು ಒದಗಿಸುವ ಐವೊಟಿ ಅಪ್ಲಿಕೇಷನ್ ಅಭಿವೃದ್ದಿಗೆ ಇದು ನೆರವಾಗಲಿದೆ.  ಒಟ್ಟಾರೆ ಐಟಿ ಟ್ರಾಫಿಕ್, ಒಟ್ಟು ಇಂಟರ್‍ನೆಟ್ ಟ್ರಾಫಿಕ್‍ನಲ್ಲಿ ವಿಡಿಯೋನ್ ಪ್ರಮುಖವಾಗಿ ಬದಲಾಗಿದೆ. 2021ರ ಹೊತ್ತಿಗೆ ಇದರ ಬಳಕೆ 2016ರಲ್ಲಿದ್ದ ಶೇ.57ರಿಂದ ಶೇ.76ಕ್ಕೆ ಹೆಚ್ಚಲಿದೆ.  ಬರುವ ಐದು ವರ್ಷಗಳಲ್ಲಿ ತಿಂಗಳಿಗೆ ಭಾರತವು 8400 ಕೋಟಿ ಇಂಟರ್‍ನೆಟ್ ವಿಡಿಯೋ ನಿಮಿಷಗಳ ಹಂತವನ್ನು ತಲುಪಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin