ಕೊಹ್ಲಿ ಹೃದಯವಂತ ಎಂದು ಬಣ್ಣಿಸಿದ ಎಬಿಡಿವಿಲಿಯರ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ABD

ಲಂಡನ್, ಜೂ.11- ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಉತ್ತಮ ಆಟಗಾರರಷ್ಟೇ ಅಲ್ಲ ಅವರು ಹೃದಯವಂತರು ಎಂದು ದಕ್ಷಿಣ ಆಫ್ರಿಕಾದ ನಾಯಕ ಎಬಿಡಿವಿಲಿಯರ್ಸ್ ಅವರು ಬಣ್ಣಿಸಿದ್ದಾರೆ. ನಾನು ಕೊಹ್ಲಿಯವರನ್ನು ಬಲು ಹತ್ತಿರದಿಂದ ನೋಡಿದ್ದೇನೆ ಐಪಿಎಲ್‍ನಲ್ಲಿ ಅವರು ಪ್ರತಿನಿಧಿಸುತ್ತಿರುವ ಆರ್‍ಸಿಬಿ ತಂಡದಲ್ಲಿ ನಾನು ಕೂಡ ಒಬ್ಬ ಆಟಗಾರನಾಗಿದ್ದು ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದೇನೆ ಮೈದಾನದಲ್ಲಿ ಆಟಗಾರರಿಗೆ ಕೊಹ್ಲಿ ಗೌರವದಿಂದ ನೋಡುತ್ತಾರೆ ಎಂದರು.

ಕೊಹ್ಲಿ ಯಾವಾಗಲೂ ತಮ್ಮ ಬ್ಯಾಟಿಂಗ್‍ನಿಂದ ತಂಡಕ್ಕೆ ಉತ್ತಮ ಆಟವನ್ನು ಆಡಲು ಪ್ರಯತ್ನಿಸುತ್ತಾರೆ ಕ್ರೀಸ್‍ನಲ್ಲಿ ಗಟ್ಟಿಯಾಗಿ ನಿಂತರೆ ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ .  ಚಾಂಪಿಯನ್ಸ್ ಟ್ರೋಫಿಯ ಇಂದಿನ ಪಂದ್ಯದಲ್ಲಿ ಸೆಮಿಫೈನಲ್‍ಗೇರಬೇಕಾದರೆ ನಾವು ಭಾರತ ತಂಡವನ್ನು ಮಣಿಸಲೇಬೇಕು. ಇಂದಿನ ಪಂದ್ಯದಲ್ಲೂ ಕೂಡ ನಾವು ಆ ತಂಡದಲ್ಲಿರುವ ಅಗ್ರೇಷಿವ್ ಆಟಗಾರರತ್ತ ಗಮನ ಹರಿಸಿರುವುದೇ ಅಲ್ಲದೆ ವಿರಾಟ್ ಕೊಹ್ಲಿಯನ್ನು ಹೆಚ್ಚು ಒತ್ತು ಕ್ರೀಸ್‍ನಲ್ಲಿ ನಿಲ್ಲದಂತೆ ನೋಡಿಕೊಳ್ಳುವತ್ತಲೂ ಚಿತ್ತ ಹರಿಸಿದ್ದೇವೆ ಎಂದು ಡಿವಿಲಿಯರ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಮೂವರು ಎಡಗೈ ಆಟಗಾರರು ಕ್ರಮವಾಗಿ ಬ್ಯಾಟಿಂಗ್ ಆರಂಭಿಸುವುದರಿಂದ ಬೃಹತ್ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಿದೆ. ನನಗೆ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಅನ್ನು ಎದುರಿಸಲು ಸಂತಸವಾಗುತ್ತದೆ ಇಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿ ಎಂದು ಆಶಿಸಿದರು.
ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಸೋತರೂ ಕೂಡ ನಾಯಕನಾಗಿ ನಾನು ನಿರ್ವಹಿಸುತ್ತಿರುವ ಪಾತ್ರ ತೃಪ್ತಿ ಬಂದಿದೆ. ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ತಂಡವನ್ನು ಸೆಮಿಫೈನಲ್‍ಗೇರಿಸುವತ್ತ ಗಮನ ಹರಿಸುತ್ತೇನೆ ಎಂಬ ವಿಶ್ವಾಸವನ್ನು ವಿಲಿಯರ್ಸ್ ಹೊರ ಹಾಕಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin