ಜಿಎಸ್‍ಟಿ ಕಾಯ್ದೆ ಹಾಗೂ ನೀಟ್ ಪರೀಕ್ಷೆಗಳಿಂದ ರಾಜ್ಯಗಳ ಹಕ್ಕುಗಳಿಗೆ ಧಕ್ಕೆ : ಬರಗೂರು

ಈ ಸುದ್ದಿಯನ್ನು ಶೇರ್ ಮಾಡಿ

Baraguru--001

ಬೆಂಗಳೂರು, ಜೂ.11- ತೆರಿಗೆ ಸರಳೀಕರಣ ಹೆಸರಿನಲ್ಲಿ ಮೋದಿ ಸರ್ಕಾರ ಜಾರಿಗೊಳಿಸುತ್ತಿರುವ ಜಿಎಸ್‍ಟಿ ಕಾಯ್ದೆ ಹಾಗೂ ಏಕೀಕೃತ ಪರೀಕ್ಷೆ ಹೆಸರಿನಲ್ಲಿ ಜಾರಿಗೊಳಿಸಿರುವ ನೀಟ್ ಪರೀಕ್ಷೆಗಳಿಂದ ರಾಜ್ಯಗಳ ಹಕ್ಕುಗಳಿಗೆ ಧಕ್ಕೆ ಬಂದೊದಗಿದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.  ಕನ್ನಡ ಜನಶಕ್ತಿ ಕೇಂದ್ರ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಜಿ.ಅಬ್ದುಲ್ ಬಶೀರ್ ಅವರ ಐದು ಕೃತಿಗಳನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯಗಳ ಭಾಷಾವಾರು ಏಕೀಕರಣದ ಸಂಭ್ರಮದಲ್ಲೇ ಎಲ್ಲಾ ಮಾತೃಭಾಷೆ ಮತ್ತು ರಾಜ್ಯ ಭಾಷೆಗಳ ಸ್ವಾಯತ್ತತೆಗೆ ಧಕ್ಕೆ ಬರುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಮಾತೃಭಾಷೆಗೆ ಧಕ್ಕೆ ಬಂದರೆ ಅದರ ವಿರುದ್ಧ ಹೋರಾಟ ರೂಪಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಪ್ರತಿಪಾದಿಸಿದ ಅವರು, ಕನ್ನಡಕ್ಕೆ ಸಾವಿಲ್ಲ. ಆದರೆ ಕನ್ನಡಕ್ಕೆ ಸವಾಲಿದೆ. ಕನ್ನಡ ಜನಪರ ಭಾಷೆಯಾಗಿರುವುದರಿಂದ ಇದುವರೆಗೆ ಉಳಿದುಕೊಂಡು ಬಂದಿದೆ. ಅನ್ಯಭಾಷಿಕರನ್ನು ಪ್ರೀತಿಯಿಂದ ಕಾಣಬೇಕು. ಅದೇ ರೀತಿ ನಮ್ಮವರಿಗೆ ಬದುಕುವ ವಾತಾವರಣ ನಿರ್ಮಿಸಬೇಕಾಗಿದೆ ಎಂದರು.

ನಾಡಗೀತೆ ಎಷ್ಟು ಇರಬೇಕು, ಹೇಗಿರಬೇಕು, ಅದರ ಲಯ ಯಾವ ರೀತಿ ಇರಬೇಕು ಎಂಬುದನ್ನು ತೀರ್ಮಾನಿಸಲು ಇದುವರೆಗೆ ಮೂರು ಬಾರಿ ಸಮಿತಿ ರಚಿಸಲಾಗಿದೆ. ಆದರೆ ವರದಿಯ ಶಿಫಾರಸ್ಸುಗಳನ್ನು ಇದುವರೆಗೆ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಬರಗೂರರು, ರಾಜ್ಯ ಸರ್ಕಾರ ಮತ್ತು ಕನ್ನಡ-ಸಂಸ್ಕøತಿ ಇಲಾಖೆಗೆ ಸಾಂಸ್ಕøತಿಕ ಮರೆವು ಆರಂಭವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಪ್ರೊ.ಅಬ್ದುಲ್ ಬಶೀರ್ ಅವರ ಕೃತಿಗಳಿಂದ ಸಂವಹನಶೀಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸದಾಗಿ ಕನ್ನಡ ಕಲಿಯುವವರಿಗೂ ಇದು ಸಹಾಯವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಡೋಜ ಡಾ.ಹಂಪ ನಾಗರಾಜಯ್ಯ, ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಾ.ವಿ.ಪಿ.ನಾರಾಯಣ, ಎಪಿಎಸ್ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಎ.ಆರ್. ಆಚಾರ್ಯ, ಕಸಾಪದ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಪ್ರಾಧ್ಯಾಪಕ ಪ್ರೊ.ಶಾಂತರಾಜು, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin