ದೋಣಿಗೆ ನೌಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೆಸ್ತರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

 

Kerala--2ಕೊಚ್ಚಿ, ಜೂ.11-ಕೇರಳದ ಕೊಚ್ಚಿ ಕರಾವಳಿ ಪ್ರದೇಶದಲ್ಲಿ ಇಂದು ಮುಂಜಾನೆ ಸರಕು ಸಾಗಣೆ ಹಡಗೊಂದು ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೆಸ್ತರು ಮೃತಪಟ್ಟು, 11 ಮಂದಿ ತೀವ್ರ ಗಾಯಗೊಂಡಿದ್ದಾರೆ.  ಬೆಸ್ತರ ದೋಣಿಗೆ ಅಪ್ಪಳಿಸಿ ನಂತರ ಪರಾರಿಯಾಗಿದ್ದ ಪನಾಮಾ ನೋಂದಣಿಯ ಕಾರ್ಗೋ ನೌಕೆ ಅಂಬೆರ್‍ನನ್ನು ನೌಕಾ ಮತ್ತು ಕ ರಾವಳಿ ರಕ್ಷಣಾ ಪಡೆ ತೀವ್ರ ಶೋಧದ ನಂತರ ಅದರ ಸಿಬ್ಬಂದಿಯೊಂದಿಗೆ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ (ಎರ್ನಾಕುಲಂ ವಲಯ) ಪಿ. ವಿಜಯನ್ ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಬೆಸ್ತರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin