ನಾಳೆ ಬೆಂಗಳೂರಿಗೆ ಉಪರಾಷ್ಟ್ರಪತಿ, ಹಲವೆಡೆ ವಾಹನ ನಿಲುಗಡೆ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Hameed-Ansari

ಬೆಂಗಳೂರು, ಜೂ.11- ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನಾಳೆ ಒಂದು ದಿನದ ಭೇಟಿಗಾಗಿ ಉದ್ಯಾನಗರಿಗೆ ಆಗಮಿಸಲಿದ್ದು , ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.  ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಎಚ್‍ಎಎಲ್ ಏರ್‍ಪೋರ್ಟ್, ಏರ್‍ಪೋರ್ಟ್ ರಸ್ತೆ ,ಇಸ್ರೋ ಜಂಕ್ಷನ್,ಮಣಿಪಾಲ್ ಜಂಕ್ಷನ್, ಇಂದಿರಾನಗರ 100 ಅಡಿ ರಸ್ತೆ , ದೊಮ್ಮಲೂರು, ಸಿ.ಬಿ.ರೋಡ್ ಜಂಕ್ಷನ್, ಎಎಸ್‍ಇ ಸೆಂಟರ್,ಟ್ರಿನಿಟಿ ಚರ್ಚ್ ಸರ್ಕಲ್, ಎಂ.ಜಿ.ರಸ್ತೆ , ವೈಬ್ಸ್ ಜಂಕ್ಷನ್ , ಮಣಿಪಾಲ್ ಸೆಂಟರ್ ಜಂಕ್ಷನ್ , ಸಿಟಿಒ ಜಂಕ್ಷನ್, ರಾಜಭವನ ರಸ್ತೆ ,ಪೊಲೀಸ್ ತಿಮ್ಮಯ್ಯ ಸರ್ಕಲ್, ಬಸವೇಶ್ವರ ಸರ್ಕಲ್ ವೃತ್ತ , ಬಲ ತಿರುವು ಪ್ಯಾಲೇಸ್ ರಸ್ತೆ , ಹಳೇ ಹೈಗ್ರೌಂಡ್ಸ್ ಜಂಕ್ಷನ್ , ಅವಿನಾಶ್ ಪೆಟ್ರೋಲ್ ಬಂಕ್, ಕನ್ನಿಂಗ್‍ಹ್ಯಾಮ್ ರಸ್ತೆ , ಚಂದ್ರಿಕಾ ಹೊಟೇಲ್ ಜಂಕ್ಷನ್, ಮಿಲ್ ರಸ್ತೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭವನ.


ಮಧ್ಯಾಹ್ನ 1 ರಿಂದ 2 ರವರೆಗೆ: ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದಯಟಿವಿ ಜಂಕ್ಷನ್ , ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್, ಸ್ಟೇಷನ್ ರೋಡ್ ಮತ್ತು ಕ್ವೀನ್ಸ್ ರಸ್ತೆ ಜಂಕ್ಷನ್ , ಬಾಳೆಕುಂದ್ರಿ ಸರ್ಕಲ್, ಟ್ರಿನಿಟಿ ಹೆಡ್‍ಕ್ವಾಟರ್ಸ್ ಜಂಕ್ಷನ್ , ಸಿಟಿಒ ಕಚೇರಿ, ಕಬ್ಬನ್ ರಸ್ತೆ , ಕೆ.ಆರ್.ರೋಡ್ ಜಂಕ್ಷನ್ , ಕಬ್ಬನ್ ರಸ್ತೆ , ಮಣಿಪಾಲ್ ಸೆಂಟ್ರಲ್ ಜಂಕ್ಷನ್ , ಬಲತಿರುವು ವೆಬ್ಸ್ ಜಂಕ್ಷನ್ , ಎಡ ತಿರುವು ಎಂ.ಜಿ.ರಸ್ತೆ , ಟ್ರಿನಿಟಿ ಚರ್ಚ್ ಸರ್ಕಲ್, ಎಎಸ್‍ಸಿ ಸೆಂಟರ್, ಸಿ.ಬಿ.ರೋಡ್ ಜಂಕ್ಷನ್ , ದೊಮ್ಮಲೂರು, ಇಂದಿರಾನಗರ 100 ಅಡಿ ರಸ್ತೆ , ಮಣಿಪಾಲ್ ಆಸ್ಪತ್ರೆ , ಇಸ್ರೋ ಜಂಕ್ಷನ್ , ರಾಜೇಶ್ವರಿ ಚಿತ್ರಮಂದಿರ, ಏರ್‍ಪೋರ್ಟ್ ಅಂಬ್ರೆಲಾ, ಎಚ್‍ಎಎಲ್ ಏರ್‍ಪೋರ್ಟ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಸಂಚಾರ ವಿಭಾಗದ ಪ್ರಕಟಣೆ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin