ಮಹಿಳಾ ವಿವಿ ಈಗ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ

ಈ ಸುದ್ದಿಯನ್ನು ಶೇರ್ ಮಾಡಿ

Akkamahadevi--01

ವಿಜಯಪುರ, ಜೂ.11- ಉತ್ತರ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಕನಸು ಇದೀಗ ನನಸಾಗಿದೆ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಶಿವಶರಣೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರಾರು ಜನರ ಜಯಘೋಷದ ನಡುವೆ ಮರುನಾಮಕರಣ ಮಾಡಿದರು.  ಸಮಾವೇಶಕ್ಕೆ ಈ ಭಾಗದ 40ಕ್ಕೂ ಹೆಚ್ಚು ಮಠಗಳ ಪೀಠಾಧೀಶರು, ಸಾವಿರಾರು ಮಹಿಳೆಯರು, ರೈತರು ಹಾಗೂ ರಾಜಕೀಯ ಗಣ್ಯರು ಸಮಾವೇಶಗೊಂಡಿದ್ದರು. ಈ ಸಮಾರಂಭದಲ್ಲಿ 14 ಮಂದಿ ಮಹಿಳಾ ಸಾಧಕಿಯರಿಗೆ ಅಕ್ಕಮಹಾದೇವಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೀರ ಮಹಿಳೆಯರ ಶಿಲ್ಪೋದ್ಯಾನವನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಈ ಭಾಗದ ಸಚಿವರು, ಶಾಸಕರು, ಅನೇಕ ನಾಯಕರು ವೇದಿಕೆಯಲ್ಲಿದ್ದರು.   ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಶಿವಶರಣೆ ಅಕ್ಕಮಹಾದೇವಿಯವರ ಹೆಸರಿಡಬೇಕೆಂಬುದು ಈ ಭಾಗದ ಜನರ ಬಹುದಿನಗಳ ಅಪೇಕ್ಷೆಯಾಗಿತ್ತು. ಆದರೆ, ಅದು ನೆರವೇರಿರಲಿಲ್ಲ. ಕೊನೆಗೆ ಜನತೆಯ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ಎಂದು ಘೋಷಿಸಿದರು.   ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರು ಜಯಘೋಷ ಕೂಗುತ್ತ ಕುಣಿದು ಕುಪ್ಪಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin