ಸಾರ್ವಜನಿಕ ಶೌಚಾಲಯದಲ್ಲೇ ಜೀವನ ನಡೆಸುತ್ತಿದೆ ಈ ಬಡ ಕುಟುಂಬ..!

ಈ ಸುದ್ದಿಯನ್ನು ಶೇರ್ ಮಾಡಿ

Family--001

ಹಾಸನ, ಜೂ.11- ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದೆ ಸಾರ್ವಜನಿಕರು ವಾಸನೆ ತಡೆಯಲಾರದೆ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇಂತಹ ಸ್ಥಳದಲ್ಲಿ ಕುಟುಂಬವೊಂದು ಜೀವನ ಸಾಗಿಸುತ್ತಿರುವ ಅಮಾನವೀಯ ಘಟನೆ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ರಮೇಶ್, ಆತನ ಪತ್ನಿ ಹಾಗೂ ನಾಲ್ಕು ಮಕ್ಕಳೊಂದಿಗೆ ಕೂಲಿ ಅರಸಿಕೊಂಡು ಜಿಲ್ಲೆಯ ಅರಕಲಗೂಡು ತಾಲೂಕಿಗೆ ವಲಸೆ ಬಂದಿದ್ದಾರೆ. ಈ ವೇಳೆ ಅವರಿಗೆ ಉಳಿದುಕೊಳ್ಳಲು ಎಲ್ಲಿಯೂ ಜಾಗ ಸಿಕ್ಕಿಲ್ಲ. ದಿಕ್ಕು ತೋಚದೆ ರಮೇಶ್ ಕುಟುಂಬ ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಕಟ್ಟಡದಲ್ಲಿ ಉಳಿದುಕೊಂಡು ಅಲ್ಲೇ ಜೀವನ ನಡೆಸುತ್ತಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದೇ ತಡ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಇಡೀ ಕುಟುಂಬವನ್ನು ಸ್ಥಳದಿಂದ ಹೊರಹಾಕಿದ್ದಾರೆ. ಹಲವು ಬಾರಿ ವಸತಿಗಾಗಿ ಅರ್ಜಿ ಹಾಕಿದ್ದರೂ ಮನೆ ಸಿಗದೆ ಅದೆಷ್ಟೋ ಮುಗ್ದ ಜೀವಿಗಳು ಪರದಾಡುತ್ತಿರುವುದು ದುರದೃಷ್ಟಕರ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin