11.35 ಲಕ್ಷ ನಕಲಿ ಪ್ಯಾನ್ ಕಾರ್ಡ್‍ಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

PanCards--0

ನವದೆಹಲಿ, ಜೂ. 11-ಈವರೆಗೆ 11.35 ಲಕ್ಷ ನಕಲಿ ಅಥವಾ ವಂಚನೆಯ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್‍ಗಳು ಪತ್ತೆಯಾಗಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ ಈ ಕಡಿಮೆ ಸಂಖ್ಯೆಯು ದೇಶದ ಆರ್ಥಿಕತೆಗೆ ಗಂಭೀರ ಧಕ್ಕೆ ಉಂಟು ಮಾಡುವುದಿಲ್ಲ ಎಂಬುದನ್ನು ಪರಿಗಣಿಸಲಾಗದು ಎಂದೂ ತಿಳಿಸಿದೆ.

ಪ್ಯಾನ್ ಕಾರ್ಡ್‍ಗಳ ನೀಡಿಕೆ ಮತ್ತು ಆದಾಯ ತೆರಿಗೆ ಸಲ್ಲಿಕೆಗಾಗಿ ಆಧಾರ್ ಕಾರ್ಡ್‍ನನ್ನು ಕಡ್ಡಾಯಗೊಳಿಸಬೇಕೆಂಬ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ನಿಯಮದ ಸಿಂಧುತ್ವವನ್ನು ಎತ್ತಿ ಹಿಡಿದಿರುವ ತನ್ನ 157 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪೀಠವು ಈ ಮಹತ್ವದ ಸಂಗತಿಯನ್ನು ತಿಳಿಸಿದೆ.
ಪತ್ತೆಯಾಗಿರುವ 11.35 ಲಕ್ಷ ನಕಲಿ/ವಂಚನೆ ಪ್ಯಾನ್ ಕಾರ್ಡ್‍ಗಳಲ್ಲಿ ವೈಯಕ್ತಿಕ ತೆರಿಗೆ ಪಾವತಿದಾರರ 10.45 ಲಕ್ಷ ಕಾರ್ಡ್‍ಗಳು ಬೋಗಸ್ ಚೀಟಿಗಳಾಗಿವೆ. ಇಂಥ ಒಟ್ಟು ದಾಖಲೆಪತ್ರಗಳಲ್ಲಿ ಶೇ.0.4ರಷ್ಟಿದೆ. ಆದಾಗ್ಯೂ ಇದು ದೇಶದ ಅರ್ಥಿಕತೆಗೆ ಗಂಭೀರ ಧಕ್ಕೆ ಉಂಟು ಮಾಡದು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin