ಜೂ.25-26 ರಂದು ಮೋದಿ-ಟ್ರಂಪ್ ಮುಖಾಮುಖಿ

ಈ ಸುದ್ದಿಯನ್ನು ಶೇರ್ ಮಾಡಿ

Modi-With-Trump

ನವದೆಹಲಿ, ಜೂ.12-ಪ್ರಧಾನಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಅಮೆರಿಕ ಪ್ರವಾಸ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿದ್ದು, ಜೂ.25-26ರಂದು ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಭೇಟಿ ಮಾಡಲಿದ್ದಾರೆ.   ಮೋದಿ ಅವರ ಅಮೆರಿಕ ಭೇಟಿ ದಿನಾಂಕ ಇಂದು ಸಂಜೆ ಅಧಿಕೃತವಾಗಿ ಪ್ರಕಟವಾಗಲಿದೆ. ಪ್ಯಾರಿಸ್ ವಾತಾವರಣ ಬದಲಾವಣೆ ಒಪ್ಪಂದದಿಂದ ಅಮೆರಿಕ ದೂರ ಸರಿದ ನಿರ್ಧಾರ ಮತ್ತು ಈ ವಿಷಯದಲ್ಲಿ ಟ್ರಂಪ್‍ರ ಭಾರತ ಟೀಕೆ ವಿವಾದಗಳು ಇನ್ನೂ ಬಿಸಿಯಾಗಿರುವಾಗಲೇ ಈ ಭೇಟಿ ಕುತೂಹಲ ಕೆರಳಿಸಿದೆ.

ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯಗಳ ನಿಟ್ಟಿನಲ್ಲಿ ಮೋದಿ-ಟ್ರಂಪ್ ಚರ್ಚೆ ಪ್ರಾಮುಖ್ಯತೆ ಪಡೆದಿದ್ದರೂ, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಸನ್ನಿವೇಶಗಳ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಭೇಟಿ ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎಂಬ ಪ್ರಶ್ನೆ ಕಾಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin