ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಖ್ಯಾತ ತೆಲುಗು ಕವಿ ನಾರಾಯಣ ರೆಡ್ಡಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Narayana-Reddy--01

ಹೈದರಾಬಾದ್,ಜೂ.12-ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಖ್ಯಾತ ತೆಲುಗು ಕವಿ ಮತ್ತು ಲೇಖಕ ಸಿ.ನಾರಾಯಣ ರೆಡ್ಡಿ ಇಂದು ಮುಂಜಾನೆ ಹೈದರಾಬಾದ್‍ನಲ್ಲಿ ವಿಧಿವಶರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.   ಪ್ರಸಿದ್ದ ಗೀತರಚನಾಕಾರರೂ ಆಗಿದ್ದ ಅವರು ನೂರಾರು ಕವಿತೆಗಳು, ಹಾಡುಗಳು, ನಾಟಕಗಳು, ಪ್ರವಾಸ ಕಥನಗಳು, ಘಜಲ್‍ಗಳು ಮತ್ತು ಪ್ರಬಂಧಗಳನ್ನು ರಚಿಸಿ ತೆಲುಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಚಲನಚಿತ್ರಗಳಿಗಾಗಿ 3,500ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಅನೇಕ ಗೀತೆಗಳು ಈಗಲೂ ಚಿತ್ರರಸಿಕರ ಜನಮಾನಸದಲ್ಲಿ ಹಚ್ಚಹಸಿರಾಗಿದೆ.

ಅನುವಾದದಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ರೆಡ್ಡಿ ಅವರಿಗೆ 1977ರಲ್ಲಿ ಪದ್ಮಶ್ರೀ ಪ್ರಶಸ್ತಿ , 1988ರಲ್ಲಿ ಜ್ಞಾನಪೀಠ ಪ್ರಶಸ್ತಿ ಹಾಗೂ 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿದ್ದವು.   ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಅನೇಕ ಗಣ್ಯರು ರೆಡ್ಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಡೀ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin