ತನ್ನ ಸಮೀಕ್ಷೆ ಹುಸಿಯಾಗಿದ್ದಕ್ಕೆ ತಾನು ಬರೆದ ಪುಸ್ತಕವನ್ನೆ ತಿಂದ ಪ್ರೊಫೆಸರ್ …! (Video)

ಈ ಸುದ್ದಿಯನ್ನು ಶೇರ್ ಮಾಡಿ

Eat-Book

ಲಂಡನ್,ಜೂ.12- ಇತ್ತೀಚೆಗೆ ನಡೆದ ಬ್ರಿಟನ್ ಚುನಾವಣೆ ಕುರಿತಾದ ತನ್ನ ಸಮೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಪ್ರೊಫೆಸರ್ ಒಬ್ಬರು ತಾನು ರಚಿಸಿದ್ದ ಕೃತಿ(ಪುಸ್ತಕ)ಯನ್ನೇ ತಿನ್ನುವ ಪರಿಸ್ಥಿತಿ ಎದುರಾಯ್ತು. ಹಾಗಾಗಿ ಆ ಪ್ರೊಫೆಸರ್ ತನ್ನ ಪಂಥದ ಪ್ರಕಾರ ಚರ್ಚೆ ವೇಳೆಯಲ್ಲಿ ಟಿವಿ ಸ್ಟುಡಿಯೋದಲ್ಲೇ ಪುಸ್ತಕ ತಿಂದರು.   ಲೇಬರ್ ಪಾರ್ಟಿಗೆ ಚುನಾವಣೆಯಲ್ಲಿ ಶೇ.38ರಷ್ಟು ಮತಗಳು ಬಂದರೆ `ಬ್ರೆಕ್ಸಿಟ್’ ಕುರಿತು ತಾನು ಬರೆದಿರುವ ಪುಸ್ತಕವನ್ನೇ ತಿನ್ನುವೆ.

ಆ ಪಕ್ಷಕ್ಕೆ ಶೇ.5ರಷ್ಟು ಮತಗಳೂ ಬರುವುದಿಲ್ಲ ಎಂದು ಪಂಥ ಹಾಕಿದ್ದರು ಪ್ರೊ.ಮಾಥ್ಯೂ ಗುಡ್‍ವಿನ್. ಆದರೆ ಅವರ ಸಮೀಕ್ಷೆ ಸಂಪೂರ್ಣ ಉಲ್ಟಾ ಗಿ ಲೇಬರ್ ಪಾರ್ಟಿ ಅಭೂತಪೂರ್ವ ಎನ್ನುವಷ್ಟು(ಶೇ.40) ಮತಗಳೊಂದಿಗೆ 261 ಸ್ಥಾನಗಳನ್ನೂ ಪಡೆಯಿತು.

ಹಾಗಾಗಿ ಶನಿವಾರ ಟಿವಿ ಚಾನಲ್ ನಡೆಸಿದ ಚರ್ಚೆಯ ವೇಳೆ ಆಂಕರ್ ಈ ವಿಷಯವನ್ನು ಪ್ರಸ್ತಾಪಿಸಿದರು. ಅಗ ಮ್ಯಾಥ್ಯೂ ಅವರು ತಾವು ಬರೆದಿದ್ದ `ಬ್ರೆಕ್ಸಿಟ್’ ಮೈ ಬ್ರಿಟನ್ ಓಟೆಡ್ ಟು ಲೀವ್ ಯು ‘ ಎಂಬ ಪುಸ್ತಕದ ಪ್ರತಿಯನ್ನು ಎಲ್ಲರೆದುರು ಕರಕರನೆ ತಿಂದೇ ಬಿಟ್ಟರು!  ಇದೇ ವೇಳೆ ಲೇಬರ್ ಪಾರ್ಟಿ ಅಧಿಕ ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ಪಂದ್ಯ ಕಟ್ಟಿದ ಇನ್ನೊಬ್ಬ ವ್ಯಕ್ತಿ 57.46 ಲಕ್ಷ ಹಣ ಕಳೆದುಕೊಂಡಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin