ಯೆಮೆನ್‍ನಲ್ಲಿ ಉಲ್ಬಣಗೊಂಡ ಕಾಲರಾ, ಸತ್ತವರ ಸಂಖ್ಯೆ 860ಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Deth-toll

ಸನ್ನಾ, ಜೂ.12-ಯೆಮೆನ್‍ನಲ್ಲಿ ಉಲ್ಬಣಗೊಂಡ ಮಾರಕ ಕಾಲರಾದಿಂದ ಈವರೆಗೆ 860 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಹೇಳಿದೆ. ಕಳೆದ ಮೂರು ದಿನಗಳಲ್ಲಿ ಈ ರೋಗಕ್ಕೆ 70 ಜನರು ಸಾವಿಗೀಡಾಗಿದ್ದು, ಕಾಯಿಲೆಯಿಂದ ನರಳ ನರಳುತ್ತಿರುವವರ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.  ಯೆಮೆನ್‍ನಲ್ಲಿ ಶಂಕಿತ ಕಾಲರಾ ಪ್ರಕರಣಗಳು 1,16,700ಕ್ಕೇರಿದೆ. ಜೂ.8ರಂದು ವರದಿಯಾದ ಪ್ರಕರಣಕ್ಕಿಂತಲೂ ಇದು 14,889ರಷ್ಟು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‍ಒ ಆತಂಕ ವ್ಯಕ್ತಪಡಿಸಿದೆ.

ಯೆಮೆನ್‍ನಲ್ಲಿ ಕಳೆದ ಏಪ್ರಿಲ್‍ನಿಂದ ಆರಂಭವಾದ ಈ ಸೋಂಕು ಕ್ಷಿಪ್ರವಾಗಿ ವ್ಯಾಪ್ತಿಸುತ್ತಿದ್ದು, ದೇಶದ 22 ಪ್ರಾಂತ್ಯಗಳಲ್ಲಿ 20 ಪ್ರದೇಶಗಳು ಅದರಲ್ಲೂ ನಿರ್ದಿಷ್ಟವಾಗಿ ರಾಜಧಾನ ಸನ್ನಾದಲ್ಲಿ ಅಪಾಯಕಾರಿ ಹಂತ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಯೆಮೆನ್‍ನಲ್ಲಿ ಅಶಾಂತಿ ಮತ್ತು ಯುದ್ಧದಿಂದ ಈವರೆಗೆ 10,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 20 ಲಕ್ಷಕ್ಕೂ ಅಧಿಕ ನಾಗರಿಕರು ಸಂತ್ರಸ್ತರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin