ಹೃದಯಾಘಾತದಿಂದ ಸೋಲದೇವನಹಳ್ಳಿ ಪಿಡಿಒ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

PDO-Dead

ನೆಲಮಂಗಲ, ಜೂ.12- ತಾಲ್ಲೂಕಿನ ಸೋಲದೇವನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಿನ್ನೆ ರಾತ್ರಿ ನೆಲಮಂಗಲದ ತಮ್ಮ ಮನೆಯಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ರಘುನಂದನ್(45) ಮೃತಪಟ್ಟ ಪಿಡಿಒ.  ಕಳೆದ ನಾಲ್ಕು ವರ್ಷಗಳಿಂದ ಸೋಲದೇವನಹಳ್ಳಿಯ ಪಿಡಿಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನೆಲಮಂಗಲ ಸಮೀಪದ ಸದಾಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಹಾಗೂ 4 ವರ್ಷದ ಹೆಣ್ಣು ಮಗುವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin