ಅನುಮಾನಾಸ್ಪದವಾಗಿ 3 ನವಿಲುಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ, ಜೂ.13-ತಾಲೂಕಿನಲ್ಲಿ ಮೂರು ನವಿಲುಗಳು ಅನುಮಾನಾಸ್ಪದವಾಗಿ ಇಂದು ಬೆಳಗ್ಗೆ ಮೃತಪಟ್ಟಿವೆ.  ಮಿಡಿಗೇಶಿಯ ಶ್ರವಣಗುಡಿ ಗ್ರಾಮದಲ್ಲಿ ಮೂರು ನವಿಲುಗಳು ಸಾವನ್ನಪ್ಪಿವೆ. ಇಂದು ಬೆಳಗ್ಗೆ ಗ್ರಾಮಸ್ಥರು ಇವುಗಳನ್ನು ನೋಡಿ ಮಿಡಿಗೇಶಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ನವಿಲುಗಳನ್ನು ಪರಿಶೀಲನೆ ನಡೆಸಿದ್ದಾರೆ. ನವಿಲುಗಳ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ವೈದ್ಯಾಧಿಕಾರಿಗಳಿಂದ ಮಾಹಿತಿ ಬಂದ ನಂತರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ನವಿಲುಗಳನ್ನು ರಾಮದೇವರ ಬೆಟ್ಟದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.

Facebook Comments

Sri Raghav

Admin