ವಿಚ್ಛೇದನ ಪಡೆದಿದ್ದ ಪತ್ನಿಯನ್ನು ಇರಿದು ಕೊಂದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Marriage-Murder--01

ಮೈಸೂರು, ಜೂ.13-ವಿಚ್ಛೇದನ ಪಡೆದಿದ್ದ ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಪಿ.ನಗರ ಮೊದಲ ಹಂತ, ಡಿ ಬ್ಲಾಕ್, 18ನೆ ಮುಖ್ಯರಸ್ತೆ ನಿವಾಸಿ ಸುನೀತ (29) ಕೊಲೆಯಾದ ವಿಚ್ಛೇದಿತ ಪತ್ನಿ.  ಸುನೀತ ಕಳೆದ 9 ವರ್ಷಗಳ ಹಿಂದೆ ಕಾರ್ತಿಕ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ 4 ವರ್ಷದ ಹಿಂದೆ ಈ ದಂಪತಿ ವಿಚ್ಛೇದನ ಪಡೆದಿದ್ದರು. ಇಂದು ಬೆಳಗ್ಗೆ ಕಾರ್ತಿಕ್ ಮಗನನ್ನು ಶಾಲೆಗೆ ಕರೆದೊಯ್ದು ಬಿಟ್ಟು ಬಂದಿದ್ದಾನೆ.


ಈ ವೇಳೆ ಕಾರ್ತಿಕ್ ಸುನೀತಾಳ ಮೇಲೆ ದಾಳಿ ಮಾಡಲು ಮುಂದಾಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಆಕೆ ಕೂಗಾಟ ಕೇಳಿ ನೆರೆಹೊರೆಯವರು ಬಂದು ನೋಡುವಷ್ಟರಲ್ಲಿ ಸುನೀತ ಮೃತಪಟ್ಟಿದ್ದಾಳೆ.  ಸ್ಥಳಕ್ಕೆ ವಿದ್ಯಾರಣ್ಯಪುರ ಠಾಣೆ ಇನ್ಸ್‍ಪೆಕ್ಟರ್ ಓಂಕಾರಪ್ಪ, ಸಿಸಿಬಿಯ ಎಸಿಪಿ ಗೋಪಾಲ್,ಡಿಸಿಪಿ ರುದ್ರಮುನಿ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin