ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಬಸವೇಗೌಡ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.14- ಎಂಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಬಸವೇಗೌಡ ಅವರನ್ನು ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ವಜಾ ಮಾಡಿ ಮೈಸೂರು ಪ್ರಾಂತ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು ನ್ಯಾಯಾಲಯ ಆದೇಶ ಹೊರಡಿಸಿದೆ. ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನವನ್ನು 2013ರ ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಟಿ.ನರಸಾಪುರ ತಾಲ್ಲೂಕು ರಂಗಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸ್ಪರ್ಧಿಸಿ ಬಸವೇಗೌಡ ಜಯ ಗಳಿಸಿದ್ದರು.

ರಂಗಸಮುದ್ರ ಸಂಘದ ವ್ಯಾಪ್ತಿಯಲ್ಲಿ ಬಸವೇಗೌಡ ವಾಸವಿರದ ಕಾರಣ ಅವರ ಬ್ಯಾಂಕ್ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಇದು ಕಾನೂನು ಬಾಹಿರವೆಂದು ಶಂಕರೇಗೌಡ ಎಂಬುವರು ದಾವೆ ಹೂಡಿದ್ದರು.   ಈ ಬಗ್ಗೆ ವಿಚಾರಣೆ ನಡೆಸಿದ ಸಹಕಾರ ಸಂಘಗಳ ಜಂಟಿ ನಿರ್ದೇಶಕರು ಬಸವೇಗೌಡ ಅವರ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

Facebook Comments

Sri Raghav

Admin