ಕಪ್ಪತಗುಡ್ಡ ಬೆಂಕಿ ಪ್ರಕರಣ : ಗದಗದಲ್ಲಿ ಸಿಐಡಿ ತನಿಖಾ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Kappatagudda--01

ಗದಗ, ಜೂ.14-ಜಿಲ್ಲೆಯ ಮಂಡರಗಿ ತಾಲೂಕಿನ ಕಪ್ಪತಗುಡ್ಡ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಇಂದು ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾರ್ಚ್ 3 ರಂದು ಮಂಡರಗಿ ತಾಲೂಕಿನ 7 ಕಡೆ ಹಾಗೂ ಗಿರವಟ್ಟಿ ತಾಲೂಕಿನ 3 ಕಡೆಗಳಲ್ಲಿ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅಧಿಕ ಪ್ರಮಾಣದ ಔಷಧಿ ಸಸ್ಯಗಳು ಬೆಂಕಿಗಾಹುತಿಯಾಗಿದ್ದವು.


ಈ ಹಿನ್ನೆಲೆಯಲ್ಲಿ ತಂಡ ಬಿಡನಾಳೆ, ಕೇಲೂರ, ವಿರವಿಪುರ ತಾಂಡಾ ಸೇರಿದಂತೆ ಶಿರಹಟ್ಟಿ ತಾಲೂಕಿನ 3 ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು. ಅರಣ್ಯ ಪ್ರದೇಶದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿದ್ದರು. ಮುಖ್ಯಮಂತ್ರಿಗಳ ಮನವಿ ಮೇರೆಗೆ ತಂಡಗಳು ಇಂದು ನಗರಕ್ಕೆ ಆಗಮಿಸಿತ್ತು. ಮುಖ್ಯಮಂತ್ರಿಗಳಿಗೆ ಸಮಗ್ರ ಮಾಹಿತಿ ನೀಡುವುದಾಗಿ ತಂಡ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin