‘ತಾಂಬೂಲ’ ಸೇವನೆ ಹಿಂದಿವೆ ನೀವು ನಂಬಲಸಾಧ್ಯವಾದ ಆರೋಗ್ಯ ಸಂಗತಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Tamboola

ಡಾ. ಅಬ್ದುಲ್ ಖಾದರ್
ಆಯುರ್ವೇದ ತಜ್ಞರು (9845199790)

ಹಳ್ಳಿಗಳಲ್ಲಿ ಊಟದ ನಂತರ ಸಾಂಬೂಲ ಸೇವನಾ ಸಾಮಾನ್ಯ, ಹಳ್ಳಿಗರಿಗೆ ಅದರ ಲಾಭವೂ ಗೊತ್ತಿದೆ, ಊಟದ ನಂತರ ತಾಂಬೂಲ ಸೇವನೆಯಿಂದ ಜೀರ್ಣಕ್ರೀಯೆ ಸುಲಭವಾದರೆ, ಹಲ್ಲುಗಳು ಗಟ್ಟಿಯಾಗುತ್ತವೆ ಎನ್ನುವುದು ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಇಷ್ಟೇ ಅಲ್ಲ ತಾಂಬೂಲ ಸೇವನೆಯಿಂದ ನಿಮಗೆ ಗೊತ್ತಿದರ ಅನೇಕ ಲಾಭಗಳೂ ಇವೆ.

ಮಧುಮೇಹ ರೋಗವುಳ್ಳವರಿಗೆ ತಾಂಬೂಲ ಸೇವನೆ ಒಂದು ಪಥ್ಯ ಅಭ್ಯಾಸ. ದಿನದಲ್ಲಿ ಎರಡು ಅಥವಾ ಮೂರು ಸಲ, ಊಟವಾದ ನಂತರ ತಾಂಬೂಲ ಸೇವಿಸುವುದು ಹಿತಕರ ಹಾಗೂ ಆರೋಗ್ಯದಾಯಕ. ಮಧುಮೇಹದಲ್ಲಿ ಬಾಯಾರಿಕೆ ಹಾಗೂ ಬಾಯಿಂದ ದುರ್ಗಂಧ, ವಾಸನೆ ಇವು ಸಾಮಾನ್ಯ. ಈ ತೊಂದರೆಗಳ ನಿವಾರಣೆಗೆ ತಾಂಬೂಲ ಸೇವನೆ ಉತ್ತಮ ಉಪಚಾರ ಎನ್ನಲಾಗಿದೆ.

ತಾಂಬೂಲ ಸೇವನೆಯನ್ನು ಯಾವಾಗಲೂ ಊಟದ ನಂತರ ಮಾಡಬೇಕು. ಎಲೆ, ಅಡಿಕೆ, ಸುಣ್ಣಗಳನ್ನು ಚೆನ್ನಾಗಿ ಅಗಿದ ಮೇಲೆ ಸುಗಂಧ ದ್ರವ್ಯಗಳಾದ ಲವಂಗ, ಜಕಾಯಿ, ಗಂಧ ಮೆಣಸು, ಏಲಕ್ಕಿ, ನಾಗಕೇಸರಿ ಮುಂತಾದ ದ್ರವಗಳನ್ನು ಜತೆಗೆ ಸೇರಿಸಿಕೊಂಡು, ತಾಂಬೂಲವನ್ನು ಚೆನ್ನಾಗಿ ಅಗಿಯಬೇಕು. ಇದು ಬಾಯಿಯ ರುಚಿಯನ್ನು ಹೆಚ್ಚು ಮಾಡುವುದೇ ಅಲ್ಲದೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಸಮೋತ್ತೇಜಕವಾಗಿದ್ದು, ಯೌವನವನ್ನು ಕಾಪಾಡುತ್ತದೆ.

ತಾಂಬೂಲ ಸೇವನೆಯಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ತಾಂಬೂಲವು ಬಾಯಿಗೆ ನಿರ್ಮಲತೆ ಮತ್ತು ಪರಿಮಳ ಕೊಟ್ಟು ಮುಖದಲ್ಲಿ ಕಾಂತಿ ಮತ್ತು ಪ್ರಸನ್ನತೆಯನ್ನುಂಟುಮಾಡುತ್ತದೆ. ದವಡೆ ಹಲ್ಲು, ವಸಡುಗಳಿಗೆ ಬಲ, ನಾಲಿಗೆಗೆ ರುಚಿ ಕೊಡುತ್ತದೆ. ಸ್ವರವನ್ನು ಸ್ವಚ್ಛಗೊಳಿಸಿ, ಮಲಬದ್ಧತೆ ನಿವಾರಿಸುತ್ತದೆ. ಬಾಯಿ ಮತ್ತು ಗಂಟಲುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ನೆಗಡಿ, ಗಂಟಲು ನೋವು ಮುಂತಾದ ರೋಗಗಳು ಉಂಟಾಗದಂತೆ ತಡೆಯುತ್ತದೆ. ಜೀರ್ಣಾಂಗಗಳನ್ನು ಉದ್ದೀಪನಗೊಳಿಸಿ ಅಗ್ನಿಮಾಂದ್ಯ, ಅಜೀರ್ಣ ರೋಗಗಳನ್ನು ನಿವಾರಿಸುತ್ತದೆ. ಗರದಿಕ್ಷ ಗುಲ್ಮ ಮುಂತಾದ ರೋಗಗಳಿಗೆ ಒಳ್ಳೆಯದು.
ಪ್ರತಿದಿನ ತಾಂಬೂಲ ಸೇವನೆ ಮಾಡುವುದರಿಂದ ಶರೀರದ ಉಷ್ಣತೆ ಸಮತೋಲನದಲ್ಲಿದ್ದು, ಮುಖ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮನಸ್ಸು ಪ್ರಸನ್ನಗೊಳ್ಳುತ್ತದೆ, ಬುದ್ಧಿ ಚುರುಕಾಗುತ್ತದೆ. ಮುಪ್ಪು ಮುಂದೂಡಲ್ಪಟ್ಟು ಯೌವನ ದೀರ್ಘಕಾಲ ರಕ್ಷಿಸಲ್ಪಡುತ್ತದೆ. ಇವೆಲ್ಲಕ್ಕಿಂತ ಮೇಲಾಗಿ ಸ್ತ್ರೀ-ಪುರುಷರಿಬ್ಬರಿಗೂ ತಾಂಬೂಲ ಉತ್ತಮ ಕಾಮೋತ್ತೇಜಕವಾಗಿದ್ದು, ಮುದ ನೀಡುತ್ತದೆ.
ವೀಳ್ಯದೆಲೆಯ ಗುಣ :

ವೀಳ್ಯದೆಲೆ ಅಥವಾ ವೀಳ್ಯೆಲೆ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ. ಸಂಸ್ಕøತದಲ್ಲಿ ನಾಗವಲ್ಲಿ ಎಂದು ಕರೆಯಲ್ಪಡುವ ಇದು ರುಚಿಯಲ್ಲಿ ಕಟು (ಖಾರ), ತಿಕ್ತ (ಕಹಿ), ಮಧುರ (ಸಿಹಿ) ರಸಗಳಿಂದ ಕೂಡಿದ್ದ ಉಷ್ಣ, ತೀಕ್ಷ್ಣ ಹಾಗೂ ಕ್ಷಾರ ಗುಣವುಳ್ಳದ್ದಾಗಿದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.  ನಾಗವಲ್ಲಿ ವೃಷ್ಯ ಎಂದರೆ ಕಾಮೋತ್ತೇಜಕವಾಗಿದ್ದು, ಬಸ್ತಿರೋಧಕ, ಮೂತ್ರಪಿಂಡ ಹಾಗೂ ಹೃದಯ ರೋಗಗಳಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ವೀಳ್ಯದ ಎಳೆಯಲ್ಲಿ ಕಾಮವನ್ನು ಉತ್ತೇಜಿಸುವ ಅಂಶಗಳಿದ್ದು, ಹಿಂದಿನ ಕಾಲದಲ್ಲಿ  ಪತಿ -ಪತ್ನಿಯರು ಮಲಗುವ ಮುನ್ನ  ಸಾಮಾನ್ಯವಾಗಿ ತಾಂಬೂಲ ಸೇವಿಸುತ್ತಿದ್ದರು.   ಎಲೆಯಿಂದ ತೆಗೆದ ಸುಗಂಧಯುಕ್ತವಾದ ತೈಲವನ್ನು ಬೇಕರಿ ಪದಾರ್ಥಗಳು ಹಾಗೂ ತಂಪು ಪಾನೀಯಗಳ ತಯಾರಿಯಲ್ಲಿ ವಿಶೇಷವಾಗಿ ಬಳಸುತ್ತಾರೆ. ಇತ್ತೀಚಿನ ಸಂಶೋಧನೆಯಿಂದ ವೀಳ್ಯದೆಲೆಯಲ್ಲಿ ಕ್ಯಾನ್ಸರ್‍ನಂತಹ ಭಯಂಕರ ರೋಗವನ್ನು ತಡೆಗಟ್ಟುವ ಗುಣವಿದೆ. ವಾತ, ಕಫ ದೋಷಗಳನ್ನು ನಾಶಮಾಡುತ್ತದೆ.

ಸುಣ್ಣದ ಗುಣ :

ತಾಂಬೂಲದ ಮೂರನೆ ಮುಖ್ಯ ಘಟಕವೇ ಸುಣ್ಣ. ಸುಧಾ, ಕ್ಷಾರ ಎಂದು ಕರೆಯಲ್ಪಡುವ ಇದು ತೀಕ್ಷ್ಣ ಉಷ್ಣ, ಕ್ಷಾರ ಗುಣಗಳಿಂದ ಕೂಡಿದ್ದು, ವಾತ ಕಫದೋಷಗಳನ್ನು ನಾಶಮಾಡುತ್ತದೆ. ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣವುಳ್ಳ ಸುಣ್ಣ ಒಳ್ಳೆಯ ಜೀರ್ಣಕಾರಕ ಹಾಗೂ ಕ್ರಿಮಿನಾಶಕವಾಗಿದೆ. ಮೂಳೆ ಮತ್ತು ದಂತಗಳ ಬೆಳವಣಿಗೆ ಮತ್ತು ಪೋಷಣೆಗೆ ಸಹಾಯ ಮಾಡುತ್ತವೆ. ತಾಂಬೂಲದ ಜತೆ ಉಪಯೋಗಿಸುವ ಲವಂಗ, ಏಲಕ್ಕಿ, ಜಾಕಾಯಿ, ಜಾಪತ್ರೆ, ಪಚ್ಚ ಕರ್ಪೂರ ಮುಂತಾದ ಸುಗಂಧ ದ್ರವ್ಯಗಳು ತಾಂಬೂಲಕ್ಕೆ ಪರಿಮಳ ಮತ್ತು ರುಚಿಯನ್ನು ಕೊಡುವುದೇ ಅಲ್ಲದೆ ಅನೇಕ ಉತ್ತಮ ಔಷಧಿ ಗುಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಣೆಗೆ ಪೂರಕವಾಗುತ್ತವೆ. ಇಂತಹ ಅಮೂಲ್ಯ ಔಷಧಿ ಗುಣಗಳಿಂದ ಕೂಡಿರುವ ತಾಂಬೂಲ ಸೇವನೆಗೆ ನಮ್ಮ ಪ್ರಾಚೀನ ಆಯುರ್ವೇದ ವೈದ್ಯಶಾಸ್ತ್ರ ಬಹಳ ಮಹತ್ವ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin