ಬಾಂಗ್ಲಾ ವಿರುದ್ಧ ಭಾರತಕ್ಕ ಭರ್ಜರಿ ಜಯ, ಪಾಕ್ ಜೊತೆ ಫೈನಲ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

India

ಬರ್ಮಿಂಗ್‍ಹ್ಯಾಮ್, ಜೂ.15– ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಭಾರತ ಬಾಗ್ಲಾದೇಶವನ್ನು 9 ವಿಕೆಟ್ ಗಳಿಂದ  ಸೋಲಿಸುವ ಮೂಲಕ ಫೈನಲ್ ತಲುಪಿದೆ. ಭಾನುವಾರದಂದು ಕೆನ್ನಿಂಗ್ ಟನ್ ನ ಓವಲ್ ಮೈದಾನದಲ್ಲಿ  ಬದ್ಧ ವೈರಿ ಪಾಕ್ ಜೊತೆ ಚಾಂಪಿಯನ್ ಪಟ್ಟಕ್ಕಾಗಿ ಫೈಟ್ ನಡೆಯಲಿದೆ.

ಇಂದು ಇಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಭಾರತ ಬಾಂಗ್ಲಾದೇಶವನ್ನು 264 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಉತ್ತಮ ಪ್ರದರ್ಶನ ನೀಡಿದ ಬಾಂಗ್ಲಾ ದಾಂಡಿಗರು ಭಾರತಕ್ಕೆ 265 ರನ್ ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಭಾತರ ಉತ್ತಮ ಆರಂಭವನ್ನು ಪಡೆದುಕೊಂಡಿತು. ರೋಹಿತ್ ಶರ್ಮ ಮತ್ತು(123) ಶಿಖರ್ ಧವನ್(46) ರ ಅದ್ಭುತ ಜೊತೆಯಾಟ ಉತ್ತಮ ಆರಂಭವನ್ನು ಒದಗಿಸಲು ನೆರವಾಯಿರು. ಎಂದಿನಂತೆ ಭರವಸೆಯ ಆಟವಾಡಿದ ರೋಹಿತ್ ಶತಕ ಸಿಡಿಸಿ ಸಂಭ್ರಮಿಸಿದರು.

ಧವನ್ ಔಟಾದ ಬಳಿಕ ಬಂದ ನಾಯಕ ಕೊಹ್ಲಿ(96) ಕೂಡ ಜವಾಬ್ದಾರಿಯುತ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು.  ಅತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪಾಕಿಸ್ತಾನ ಫೈನಲ್‍ಗೇರಿರುವುದರಿಂದ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧ ನಡೆದ ಇಂದಿನ ಪಂದ್ಯ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿತ್ತು. ಕೊಹ್ಲಿ  ಏಕದಿನ ಕ್ರಿಕೆಟ್ ನಲ್ಲಿ 8 ಸಾವಿರ ರನ್ ಗಳ ಗಡಿ ದಾಟಿದರೆ, ರೋಹಿತ್ ಏಕದಿನ ಕ್ರಿಕೆಟ್ ನಲ್ಲಿ 11 ನೇ ಶತಕವನ್ನು ಸಿಡಿಸಿ ಸಂಭ್ರಮಿಸಿದರು

ಸಂಕ್ಷಿಪ್ತ ಸ್ಕೋರ್ :

ಭಾರತ : 265/1 (40.1 ov)
ಬಾಂಗ್ಲಾದೇಶ : 264/7 (50.0 ov)

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin