ಮೈಸೂರು ಮಹಾರಾಣಿ ಈಗ ಗರ್ಭಿಣಿ, ಅರಮನೆಯಲ್ಲಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Mysuru-King

ಮೈಸೂರು, ಜೂ.15-ರಾಜಮಾತಾ ಪ್ರಮೋದಾದೇವಿ ಒಡೆಯರ್ ಅವರ ದತ್ತು ಪುತ್ರ ಯದುವೀರ್ ಅವರ ಪತ್ನಿ ತ್ರಿಷಿಕಾ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಹಾರಾಣಿ ತ್ರಿಷಿಕಾಕುಮಾರಿ 4 ತಿಂಗಳ ಗರ್ಭಿಣಿಯಾಗಿದ್ದು ಈ ಸುದ್ದಿಯಿಂದ ಅರಮನೆಗೆ ಬರುವ ಮಗುವಿನ ಆಗಮನಕ್ಕೆ ರಾಜವಂಶಸ್ಥರು ಕಾತರದಿಂದ ಕಾಯುವಂತಾಗಿದೆ. ದಸರಾ ವೇಳೆಗೆ ಯುವರಾಜ/ರಾಣಿ ಬರುವ ನಿರೀಕ್ಷೆಯಿದ್ದು , ರಾಜ ಪರಿವಾರದಲ್ಲಿ ಸಂಭ್ರಮಕ್ಕೆ ಎಡೆಮಾಡಿಕೊಟ್ಟಿದೆ.

ಮೈಸೂರು ರಾಜ ವಂಶಸ್ಥರಿಗೆ ಅಲಮೇಲಮ್ಮ ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಒಡೆಯರಿಗೆ ಮಕ್ಕಳಾಗದಿರಲಿ ಎಂಬ ಶಾಪವಿತ್ತಿದ್ದ ಹಿನ್ನೆಲೆಯಲ್ಲಿ ಈ ವಂಶಸ್ಥರಿಗೆ ಸಂತಾನ ಭಾಗ್ಯವಿರಲಿಲ್ಲ. ಹಾಗಾಗಿ ಯುವರಾಜ ಯದುವೀರ್ ಮತ್ತು ತ್ರಿಷಿಕಾಕುಮಾರಿ ಅವರಿಂದ ರಾಜಮಾತೆ ಪ್ರಮೋದಾ ದೇವಿ ಅಲಮ್ಮನ ದೇವಾಲಯದಲ್ಲಿ ಪ್ರಾಯಶ್ಚಿತ ಪೂಜೆ ನೆರವೇರಿಸಿದ್ದರು.   ಇದೀಗ ದೇವರ ಕರುಣೆಯಿಂದ ಮತ್ತೆ ಅರಮನೆಯಲ್ಲಿ ಮಗುವಿನ ನಗು ಕೇಳುವ ಸಂದರ್ಭ ಒದಗಿ ಬಂದಿರುವುದರಿಂದ ಸಂತಸ ಮೇರೆಮೀರಿದೆ. ದಸರಾ ವೇಳೆಗೆ ಮಗುವಿನ ಜನನವಾಗುವ ಸಾಧ್ಯತೆ ಇದೆ ಎಂದು ಅರಮನೆ ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ. ಹಿಂದೂ ಧರ್ಮದ ಪ್ರಕಾರ ಮಗು ಜನದ ನಂತರ ಇಂತಿಷ್ಟು ಸಮಯ ಸೂತಕವಿರುವುದರಿಂದ ಆ ವೇಳೆ ಯಾವುದೇ ಶುಭ ಕಾರ್ಯಗಳಲ್ಲಿ ಆ ಕುಟುಂಬದವರು ಪಾಲ್ಗೊಳ್ಳುವಂತಿಲ್ಲ.

ರಾಜ ಕುಟುಂಬಕ್ಕೆ ಜನನ ಸೂತಕ ಅನ್ವಯಿಸುವುದಿಲ್ಲ. ಆದ್ದರಿಂದ ದಸರಾ ಯಾವಾಗಲೂ ನಡೆಯುವಂತೆಯೇ ಆಗುತ್ತದೆ ಎಂದು ಜ್ಯೋತಿಷಿಗಳು ಮಾಹಿತಿ ನೀಡಿರುವುದು ಸಹ ವರದಿಯಾಗಿದೆ.   ಮೈಸೂರು ರಾಜಮನೆತನದ ಉತ್ತರಾಧಿಕಾರಿಗೆ ಯಾವುದೇ ಕಾನೂನುಬದ್ಧ ಸ್ಥಾನವಿಲ್ಲ, ಹೀಗಿದ್ದರೂ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜನತೆ ಒಡೆಯರ್ ಕುಟುಂಬವನ್ನು ಅಪಾರವಾಗಿ ಗೌರವಿಸುತ್ತಾರೆ. ಆಧರಿಸುತ್ತಾರೆ. ಹೀಗಾಗಿ ಮಗುವಿನ ಆಗಮನ ಸಂತಸಕ್ಕೆ ಕಾರಣವಾಗಿದೆ.   ಕಳೆದ ವರ್ಷ ದಸರಾಗೂ ಮುನ್ನ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin