ಕರ್ನಾಟಕದ ಕಾಫಿಯನ್ನು ಬ್ರಾಂಡ್ ಮಾಡಿ ವಿದೇಶಿಗಳಿಗೆ ರಫ್ತು : ನಿರ್ಮಲಾ ಸೀತಾರಾಮನ್

ಈ ಸುದ್ದಿಯನ್ನು ಶೇರ್ ಮಾಡಿ

Nirmala--01

ಚಿಕ್ಕಮಗಳೂರು,ಜೂ.16- ರಾಜ್ಯದ ಕಾಫಿಯನ್ನು ಬ್ರ್ಯಾಂಡ್ ಮಾಡಿ ವಿದೇಶಿಗಳಿಗೆ ರಫ್ತು ಮಾಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದರು.  ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆಯುತ್ತಿದ್ದು ಉತ್ತಮ ಗುಣಮಟ್ಟದಲ್ಲಿದೆ. ಇದನ್ನು ಹೊರ ದೇಶಗಳಿಗೆ ಬ್ರ್ಯಾಂಡ್‍ನಲ್ಲಿ ಕಳುಹಿಸಿಕೊಟ್ಟರೆ ಉತ್ತಮ ಮಾರುಕಟ್ಟೆ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಿಗುವ ಕಾಫಿ ಇನ್ನು ಏಕೆ ಬ್ರ್ಯಾಂಡ್ ಆಗಿಲ್ಲ ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮೇಕಿನ್ ಇಂಡಿಯಾ ಕಾರ್ಯಕ್ರಮದಡಿ ವಿದೇಶಿ ನೇರ ಬಂಡವಾಳ ಹೆಚ್ಚಾಗಿದೆ. ಎಲ್ಲರೊಡನೆ ಎಲ್ಲರ ವಿಕಾಸ ಸಮ್ಮೇಳನವನ್ನು ಪ್ರತಿ ಜಿಲ್ಲೆಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.   ಓಬಿರಾಯನ ಕಾಲದ ನಿರುಪಯುಕ್ತ ಕಟ್ಟಳೆಯನ್ನು ತೆಗೆದು ಹಾಕಲು ಮೋದಿ ಅವರು ಶ್ರಮವಹಿಸಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಶಾಸಕ ಸಿ.ಟಿ.ರವಿ , ಜೀವರಜ್, ಸಂಸದೆ ಶೋಭಾ ಕರಂದ್ಲಾಜೆ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮುಂತಾದವರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin