ಮುಂಬೈ ಸರಣಿ ಸ್ಫೋಟ ಪ್ರಕರಣ : ಮುಸ್ತಫಾ ದೊಸ್ಸಾ, ಅಬು ಸಲೇಂ ಅಪರಾಧಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Abu-salem

ಮುಂಬೈ, ಜೂ.16-1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಮತ್ತು ಕುಖ್ಯಾತ ಪಾತಕಿಗಳಾದ ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂರನ್ನು ಇಲ್ಲಿನ ವಿಶೇಷ ಭಯೋತ್ಪಾದನಾ ನಿಗ್ರಹ (ಟಾಡಾ) ನ್ಯಾಯಾಲಯವು ಇಂದು ಅಪರಾಧಿ ಎಂದು ಘೋಷಿಸಿ ತೀರ್ಪು ನೀಡಿದೆ. ತಲೆಮರೆಸಿಕೊಂಡಿರುವ ಆತನ ಸಹೋದರ ಮಹಮದ್ ದೊಸ್ಸಾನನ್ನೂ ಕೋರ್ಟ್ ಅಪರಾಧಿ ಎಂದು ಪರಿಗಣಿಸಿದೆ.   ಕ್ರಿಮಿನಲ್ ಒಳಸಂಚು, ಸ್ಫೋಟಕ ಪೂರೈಕೆ ಮತ್ತು ಕಗ್ಗೊಲೆಗಳ ಆರೋಪಗಳ ಹಿನ್ನೆಲೆಯಲ್ಲಿ ಇವರನ್ನು ಅಪರಾಧಿಗಳು ಎಂದು ಕೋರ್ಟ್ ಘೋಷಿಸಿದೆ. ಸ್ಫೋಟ ಪ್ರಕರಣದ ಮಾಸ್ಟರ್‍ಮೈಂಡ್ ಮುಸ್ತಾಫ ಯುವಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಶಸ್ತ್ರಾಸ್ತ್ರ ಬಳಕೆ ತರಬೇತಿ ಕೊಡಿಸಿದ್ದ.

ಈತನೊಂದಿಗೆ ಫಿರೋಜ್ ಅಬ್ದುಲ್ ರಶೀದ್ ಖಾನ್ ಮತ್ತು ತಾಹಿರ್ ಮರ್ಚೆಂಟ್ ಅವರನ್ನು ಸಹ ದೋಷಿಗಳು ಎಂದೂ ಘೋಷಿಸಿದೆ. ಈ ಆರೋಪಿಗಳೆಲ್ಲರೂ ಮುಂಬೈ ಸರಣಿ ಸ್ಫೋಟಗಳಿಗೆ ಸಂಚು ರೂಪಿಸಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೂರೈಸಿದ್ದರು
ಅಬು ಸಲೇಂ ಮತ್ತು ಮುಸ್ತಫಾ ದೊಸ್ಸಾ ಸೇರಿ ಏಳು ಆರೋಪಿಗಳು ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಇಂದು ಹಾಜರಾಗಿದ್ದರು. ಎರಡನೇ ತಂಡದ ಆರೋಪಿಗಳ ವಿರುದ್ಧ ಕೋರ್ಟ್ ನೀಡಿದ ತೀರ್ಪು ಇದಾಗಿದೆ.   2007ರಲ್ಲಿ ಮೊದಲ ಹಂತದ ವಿZರಣೆ ಪೂರ್ಣಗೊಂಡಿತ್ತು. ಟಾಡಾ ಕೋರ್ಟ್ 100 ಮಂದಿ ಆರೋಪಿಗಳೆಂದು ಘೋಷಿಸಿತ್ತು. 2007ರಲ್ಲಿ 23 ಮಂದಿಯನ್ನು ಖುಲಾಸೆಗೊಳಿಸಿತ್ತು.
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಅಬು ಸಲೇಂ ಮತ್ತು ಇತರ ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದರು.

ಅಬು ಸಲೇಂ ವಿರುದ್ಧ ಗುಜರಾತ್‍ನಿಂದ ಮುಂಬೈಗೆ ಶಸ್ತಾಸ್ತ್ರಗಳನ್ನು ಸಾಗಿಸಿದ ಸಾಬೀತಾಗಿತ್ತು. ಅಲ್ಲದೇ ಚಿತ್ರನಟ ಸಂಜಯ್ ದತ್‍ಗೆ ಅಬು ಸಲೇಂ ಎಕೆ-56 ರೈಫಲ್ ಮತ್ತು 250 ಬುಲೆಟ್‍ಗಳನ್ನು ನೀಡಿದ್ದ ಮತ್ತು ಸ್ಫೋಟದ ಘಟನೆ ನಂತರ ಎರಡು ದಿನಗಳ ಬಳಿಕ ದತ್ ಮನೆಗೆ ಭೇಟಿ ನೀಡಿದ್ದ ಎಂಬ ಆರೋಪ ಇತ್ತು.

ಪೋರ್ಚ್‍ಗಲ್‍ನಲ್ಲಿ ಆಶ್ರಯ ಪಡೆದಿದ್ದ ಅಬು ಸಲೇಂನನ್ನು ಸತತ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಭಾರತಕ್ಕೆ ಹಸ್ತಾಂತರ ಪಡೆಯಲಾಗಿತ್ತು.
ಇವರಿಬ್ಬರು ಕುಪ್ರಸಿದ್ಧ ಪಾತಕಿ ದಾವೂದ್ ಇಬ್ರಾಹಿಂದ ಸಹಚರರಾಗಿದ್ದರು. 12ನೇ ಮಾರ್ಚ್ 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಜನ ಗಾಯಗೊಂಡಿದ್ದರು. ಈ ದಾಳಿಯಲ್ಲಿ 27 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin