ಕುಖ್ಯಾತ ಎಲ್‍ಇಟಿ ಉಗ್ರ ಜುನೈದ್ ಮಟ್ಟೂ ಹಾಗೂ ಇನ್ನಿಬ್ಬರ ಶವಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

 

LET--01

ಶ್ರೀನಗರ, ಜೂ.17-ದಕ್ಷಿಣ ಕಾಶ್ಮೀರದ ಅರ್ವನಿ ಗ್ರಾಮದಲ್ಲಿ ನಿನ್ನೆ ಸೇನಾ ಪಡೆ ಜೊತೆ ನಡೆದ ಗುಂಡಿನ ಚಕಮಕಿ ಸ್ಥಳದಲ್ಲಿ ಲಷ್ಕರ್-ಎ-ತೈಬಾದ (ಎಲ್‍ಇಟಿ) ಕುಖ್ಯಾತ ಉಗ್ರಗಾಮಿ ಜುನೈದ್ ಅಹಮದ್ ಮಟ್ಟೂ ಹಾಗೂ ಇನ್ನಿಬ್ಬರು ಭಯೋತ್ಪಾದಕರ ಮೃತದೇಹಗಳನ್ನು ಇಂದು ವಶಪಡಿಸಿಕೊಳ್ಳಲಾಗಿದೆ.  24 ವರ್ಷದ ಮಟ್ಟೂ ಅಲಿಯಾಸ್ ಜಾನಾ ಶವವಲ್ಲದೇ, ಇನ್ನಿಬ್ಬರು ಎಲ್‍ಇಟಿ ಉಗ್ರರಾದ ಅದಿಲ್ ಮುಸ್ತಫಾ ಮಿರ್ ಅಲಿಯಾಸ್ ನಾನಾ (18) ಹಾಗೂ ನಿಸಾರ್ ಅಹಮದ್ ವಾನಿ (20) ಇವರ ಮೃತದೇಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಲವಾರು ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳಲ್ಲಿ ಭಾಗಿಯಾಗಿದ್ದ ಮಟ್ಟೂ ಮತ್ತು ಆತನ ಸಹಚರರಿಬ್ಬರನ್ನು ನಿನ್ನೆ ನಡೆದ ಎನ್‍ಕೌಂಟರ್‍ನಲ್ಲಿ ಯೋಧರು ಕೊಂದು ಹಾಕಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin