ಕೇರಳದ ಪ್ರಥಮ ಮೆಟ್ರೋ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Metro--01

ಕೊಚ್ಚಿ, ಜೂ.17 : ಕೇರಳ ರಾಜ್ಯದ ಪ್ರಥಮ ಮೆಟ್ರೋ ಸೇವೆ ಕೊಚ್ಚಿ ನಗರದಲ್ಲಿ ಇಂದಿನಿಂದ ವಿಧ್ಯುಕ್ತ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊಚ್ಚಿ ಮೆಟ್ರೋದ ಮೊದಲ ಹಂತವನ್ನು ಲೋಕಾರ್ಪಣೆ ಮಾಢಿದರು.   ನವದೆಹಲಿಯಿಂದ ಬೆಳಗ್ಗೆ ಇಲ್ಲಿನ ನೌಕಾಪಡೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಪಲರಿವತೊಮ್ ನಿಲ್ದಾಣಕ್ಕೆ ತೆರಳಿ, ಮೆಟೋದಲ್ಲಿ ಪಾತಡಿಪಳ್ಳಂವರೆಗೆ ಪ್ರಯಾಣ ಮಾಡಿದರು. ಕೇರಳ ರಾಜ್ಯಪಾಲ ಪಿ. ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ನಗರಾಭಿವೃದ್ದಿ ಸಚಿವ ಎಂ.ವೆಂಕಯ್ಯ ನಾಯ್ಡು, ಮೆಟ್ರೋ ಕಾರಣ ಪುರುಷ ಇ.ಶ್ರೀಧರನ್ ಮೊದಲಾದವರು ಈ ಸಂದರ್ಭದಲ್ಲಿ ಪ್ರಧಾನಿ ಜೊತೆಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin